ADVERTISEMENT

ಸಮಾಜದಲ್ಲಿರುವ ಲೋಪದೋಷವನ್ನು ತಿದ್ದುವ ಶಕ್ತಿ ನಾಟಕಗಳಿಗಿದೆ: ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 1:53 IST
Last Updated 13 ಜುಲೈ 2025, 1:53 IST
ಚನ್ನರಾಯಪಟ್ಟಣದಲ್ಲಿ ಜನಮನದಾಟದ ಕಲಾವಿದರು ಮಾಯಾಮೃಗ ನಾಟಕ ಅಭಿನಯಿಸಿದರು
ಚನ್ನರಾಯಪಟ್ಟಣದಲ್ಲಿ ಜನಮನದಾಟದ ಕಲಾವಿದರು ಮಾಯಾಮೃಗ ನಾಟಕ ಅಭಿನಯಿಸಿದರು   

ಚನ್ನರಾಯಪಟ್ಟಣ: ಸಮಾಜದಲ್ಲಿರುವ ಲೋಪದೋಷವನ್ನು ತಿದ್ದುವ ಶಕ್ತಿ ನಾಟಕಗಳಿಗಿದೆ ಎಂದು ದಿಂಡಗೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಲಿಂಗೇಗೌಡ ಹೇಳಿದರು.

ಪಟ್ಟಣದಲ್ಲಿ ಎರಡು ದಿನ ಜಾನಪದ ಝೇಂಕಾರ ಮತ್ತು ನಾಟಕೋತ್ಸವ ಆಯೋಜಿಸಲಾಗಿತ್ತು.

ಪಟ್ಟಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ದಿಂಡಗೂರು ಗ್ರಾಮದ ನೆಲದನಿ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚಿಸಿದ ‘ಮಾಯಾಮೃಗ’ ಮತ್ತು  ಬಾನುಮುಷ್ಕಾಕ್ ರಚಿಸಿದ ‘ಎದೆಯ ಹಣತೆ ’ ಕತೆ ಆಧಾರಿತ ನಾಟಕವನ್ನು ಶಿವಮೊಗ್ಗ ಜಿಲ್ಲೆ ಹೆಗ್ಗೋಡು ಜನಮನದಾಟದ ಕಲಾವಿದರು ಅಭಿನಯಿಸಿದರು.

ಪಟ್ಟಣದಲ್ಲಿ ಎರಡು ದಿನ ಜಾನಪದ ಝೇಂಕಾರ ಮತ್ತು ನಾಟಕೋತ್ಸವ ಆಯೋಜಿಸಲಾಗಿತ್ತು. ಕಲಾವಿದರಾದ ಸ್ವಾಮಿ ಮತ್ತು ಶಿವನಗೌಡ ಪಾಟೀಲ ತಂಡದವರು ಜನಪದ ಗೀತಗಾಯನ  ನಡೆಸಿಕೊಟ್ಟರು. ಮೊದಲನೇ ದಿನ ವಿದ್ಯಾಕಾಮತ್ ಅಭಿನಯದ ಮಹಿಳಾ ಏಕ ವ್ಯಕ್ತಿ ನಾಟಕ ‘ದೀಪಧಾರಿಣಿ’ ಪ್ರದರ್ಶಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಳ್ಳಿ ವೆಂಕಟೇಶ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಸಾಧನೆ ಮಾಡಲು ಕುಟುಂಬದಲ್ಲಿ ನೈತಿಕ ಬೆಂಬಲ ಬೇಕು. ನೈತಿಕ ಬೆಂಬಲ ಇದ್ದರೆ ಉತ್ತಮ ಸಾಧನೆಗೆ ಅವಕಾಶವಾಗುತ್ತದೆ.  ಹಾಸನದ ಲೇಖಕಿ ಬಾನುಮುಷ್ತಾಕ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ ಎಂದರು.

ದಿಂಡಗೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಲಿಂಗೇಗೌಡ ಮಾತನಾಡಿ, ಕನ್ನಡದ ಮೇರು ಸಾಹಿತಿಗಳಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತು ಬಾನುಮುಷ್ತಾಕ್ ಅವರ ಕತೆಯಾಧರಿತ ನಾಟಕಗಳನ್ನು ಪ್ರದರ್ಶಿಸಿರುವುದು ಉತ್ತಮ ಬೆಳೆವಣಿಗೆ. ಮುಂದೆಯೂ ಇಂಥ ನಾಟಕೋತ್ಸವಕ್ಕೆ ಸಹಕಾರ ನೀಡಲಾಗುವುದು. ಎಂದು ತಿಳಿಸಿದರು.
 
ಆರು ವರ್ಷಗಳಿಂದ ಪ್ರತಿವರ್ಷ ನಾಟಕೋತ್ಸವ ಏರ್ಪಡಿಸಲಾಗುತ್ತಿದೆ. ಪ್ರತಿವರ್ಷ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ತಾಲ್ಲೂಕು ಜಾನಪದ ಪರಿಷತ್ತು ಅದ್ಯಕ್ಷ ಸಂತೋಷ್ ದಿಂಡಗೂರು ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಮುನಾವರ್ ಪಾಷಾ, ಕಲಾವಿದ ಮಿಲಿಟರಿ ಮಂಜು ಮಾತನಾಡಿದರು. ಲಕ್ಕಿ ಕೂಪನ್ ಮೂಲಕ ಪ್ರೇಕ್ಷಕರಿಗೆ ಬಹುಮಾನ ನೀಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.