ADVERTISEMENT

30ರಿಂದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ.ಹಂಪನಹಳ್ಳಿ ತಿಮ್ಮೇಗೌಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 15:34 IST
Last Updated 15 ಮಾರ್ಚ್ 2022, 15:34 IST
ಎಚ್‌.ಎಲ್‌ ಮಲ್ಲೇಶಗೌಡ
ಎಚ್‌.ಎಲ್‌ ಮಲ್ಲೇಶಗೌಡ   

ಹಾಸನ: ‘ಮಾರ್ಚ್‌ 30 ಮತ್ತು 31 ರಂದು 20ನೇ ಜಿಲ್ಲಾ ಕನ್ನಡ ಸಾಹಿತ್ಯಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಸಮ್ಮೇಳನಾಧ್ಯರನ್ನಾಗಿ ಜಾನಪದವಿದ್ವಾಂಸ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಎಚ್.ಎಲ್ ಮಲ್ಲೇಶಗೌಡ ಹೇಳಿದರು.

ನಗರದ ಹೊರಲವಯದ ಬೂವನಹಳ್ಳಿ ಗ್ರಾಮದಲ್ಲಿ ನುಡಿ ಉತ್ಸವ ನಡೆಸಲುತೀರ್ಮಾನಿಸಲಾಗಿದೆ. ಈ ಬಾರಿ ಸಮ್ಮೇಳನವನ್ನು ಗ್ರಾಮ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಾಹಿತ್ಯ ಉತ್ಸವವನ್ನು ಗ್ರಾಮ ಮಟ್ಟಕ್ಕೆ ವಿಸ್ತರಣೆ ಮಾಡುವುದು ಒಂದು ಉದ್ದೇಶವಾದರೆ, ಗ್ರಾಮೀಣ ಭಾಗದ ಜನರುಉತ್ಸಾಹದಿಂದ ಭಾಗಿಯಾಗಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

'ಸಮ್ಮೇಳನದಲ್ಲಿ ಭಾಗಿಯಾಗುವವರಿಗೆ ನಗರ ಸಾರಿಗೆ ವ್ಯವಸ್ಥೆಮಾಡಲಾಗಿದೆ. ಪರೀಕ್ಷಾ ಸಮಯ ಆಗಿರುವುದರಿಂದ ವಿದ್ಯಾರ್ಥಿಗಳ ಬದಲಾಗಿಜನರನ್ನು ಹೆಚ್ಚು ಪಾಲ್ಗೊಳ್ಳುವಂತೆ ಮಾಡಲಾಗುವುದು. ಮಾರ್ಚ್‌31 ರ ಒಳಗೆಸಮ್ಮೇಳನ ಮಾಡಿದರೆ ₹ 5 ಲಕ್ಷ ಅನುದಾನ ನೀಡುವುದಾಗಿ ಸೂಚನೆಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು" ಎಂದು ಸ್ಪಷ್ಟಪಡಿಸಿದರು.

ADVERTISEMENT

'ಸಮ್ಮೇಳನಕ್ಕೆ ಒಟ್ಟಾರೆ ₹ 15 ಲಕ್ಷ ಖರ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನುಸಂಪರ್ಕಿಸಲಾಗಿದೆ. ಸಾರ್ವಜನಿಕ ವಂತಿಗೆ ಸಂಗ್ರಹ ಮಾಡದಿರಲು ನಿರ್ಧರಿಸಲಾಗಿದೆ. ಬದಲಾಗಿ ಜಿಲ್ಲಾ ಪಂಚಾಯಿತಿ, ನಗರಸಭೆ, ಎಚ್‌ಡಿಸಿಸಿಬ್ಯಾಂಕ್, ಹಾಸನ ಹಾಲು ಒಕ್ಕೂಟ ಮೊದಲಾದವರನ್ನು ಭೇಟಿ ಮಾಡಲಾಗಿದ್ದು,ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ" ಎಂದು ಹೇಳಿದರು.

ಸಮ್ಮೇಳನ ಅಂಗವಾಗಿ ಸಾಹಿತ್ಯ ಸಿರಿ ಹೆಸರಿನ ಸ್ಮರಣ ಸಂಚಿಕೆ ಹೊರತರಲುಉದ್ದೇಶಿಸಲಾಗಿದೆ. ಇದಕ್ಕಾಗಿ ಲೇಖನ ಕಳಿಸುವವರು ಮಾರ್ಚ್‌ 20 ರ ಒಳಗೆಕಸಾಪ ಮಿಂಚಂಚೆ (ಇ–ಮೇಲ್ ಐಡಿ)kasapahsn@gmail.com ಈ ವಿಳಾಸಕ್ಕೆತಲುಪಿಸುವಂತೆ ಕೋರಿದರು.

'ಸಮ್ಮೇಳನದ ಆಹ್ವಾನ ಪತ್ರಿಕೆ ಮುದ್ರಣ ನಂತರ ಗೋಷ್ಠಿ, ಮತ್ತಿತರಕಾರ್ಯಕ್ರಮಗಳ ವಿವರ ಬಹಿರಂಗ ಪಡಿಸಲಾಗುವುದು. ಆರಂಭದ ದಿನಬೂವನಹಳ್ಳಿ ಬೈಪಾಸ್ ನಿಂದ ಊರಿನೊಳಗೆ ಸಮ್ಮೇಳನಾಧ್ಯಕ್ಷರು ಹಾಗೂ ಕಲಾತಂಡಗಳ ಮೆರವಣಿಗೆ ನಡೆಯಲಿದೆ" ಎಂದರು.

ಸಮ್ಮೇಳನದ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಕಾರ್ಯಕಾರಿ ಸಮಿತಿಸಭೆಯಲ್ಲಿ ಹಿರಿಯ ಸಾಹಿತಿಗಳಾದ ನಾಗೇಶ್ ಕೌಂಡಿನ್ಯ, ಗಿರಿಮನೆಶಾಮರಾವ್, ಡಾ.ಹಂಪನಹಳ್ಳಿ ತಿಮ್ಮೇಗೌಡ, ಶ್ರೀ ವತ್ಸ ಎಸ್. ವಟಿ, ಡಾ.ಚಂದ್ರು ಕಾಳೇನಹಳ್ಳಿ, ಪಂಕಜ ನುಗ್ಗೇಹಳ್ಳಿ, ಬೆಳಗುಲಿ ಕೆಂಪಯ್ಯ, ರತ್ನಕಾಳೇಗೌಡ, ಡಿ.ಎಸ್.ರಾಮಸ್ವಾಮಿ, ಡಿ.ಎನ್.ಯೋಗೇಶ್, ಲಲಿತ ಎಸ್.ಆರ್.ಕೆ. ಪದ್ಮನಾಭ, ಹೊ.ರಾ. ಪರಮೇಶ್ ಸೇರಿದಂತೆ ಹಲವರ ಹೆಸರುಪ್ರಸ್ತಾಪವಾದವು.ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ, ಗ್ರಾಮೀಣ ಸೊಗಡಿನ ಸಂಸ್ಕೃತಿಗೆ ಹತ್ತಿರವಾಗಿರುವ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದಅನುಮೋದಿಸಲಾಯಿತು ಎಂದು ಮಲ್ಲೇಶಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರವ ಕೋಶಾಧ್ಯಕ್ಷ ಬಿ.ಎನ್. ಜಯರಾಮ, ಗೌರವಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಜಿ.ಸುರೇಶ್ , ವಿಶೇಷ ಆಹ್ವಾನಿತ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.