ADVERTISEMENT

ಕೆಂಪೇಗೌಡ ಜಯಂತಿ: ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:30 IST
Last Updated 28 ಜೂನ್ 2025, 16:30 IST
 ಹನ್ಯಾಳು ಗ್ರಾಮದಲ್ಲಿ  ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು
 ಹನ್ಯಾಳು ಗ್ರಾಮದಲ್ಲಿ  ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು   

ಕೊಣನೂರು: ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದಲ್ಲಿ ಕೆಂಪೇಗೌಡ ಯುವಕರ ಬಳಗ ಮತ್ತು ಗ್ರಾಮಸ್ಥರು ಪ್ರಥಮ ವರ್ಷದ ಕೆಂಪೇಗೌಡ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಕೆಂಪೇಗೌಡರ ಭಾವಚಿತ್ರ ಅನಾವರಣಗೊಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ಶಂಕರ್ ಮಾತನಾಡಿದರು. ಕೆಂಪೇಗೌಡ ಜಯಂತಿ ನಿಮಿತ್ತ ಪ್ರಾಥಮಿಕ ಶಾಲೆ ಆವರಣದಲ್ಲಿ ಹಾಸನದ ಇಂಡಿಯಾನಾ ಆಸ್ಪತ್ರೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಡಾ.ನಿರೂಪ್, ಡಾ. ನಯೀಮ್ ಸಿದ್ದಿಕ್ ಆರೋಗ್ಯ ತಪಾಸಣೆ ನಡೆಸಿದರು.

ADVERTISEMENT

ಹನ್ಯಾಳು, ರುದ್ರಪಟ್ಟಣ, ಸೋಂಪುರ ಹಾಗೂ ಸುತ್ತಮುತ್ತಲಿನ ಗ್ರಾಮದ 300ಕ್ಕೂ ಹೆಚ್ಚು ಜನ ಹೃದಯದ ತಪಾಸಣೆ, ಇಸಿಜಿ, ಕಣ್ಣಿನ ಪರೀಕ್ಷೆ, ಕೀಲು ಮತ್ತು ಮೂಳೆ ಪರೀಕ್ಷೆ ಮಾಡಿಸಿಕೊಂಡರು. 25 ಯೂನಿಟ್ ರಕ್ತ ಸಂಗ್ರಹವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.