ADVERTISEMENT

ಕುಶಾಲನಗರ: ಕಾವೇರಿ ‌ನದಿಗೆ ಕೊಳಚೆ ನೀರು

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:28 IST
Last Updated 1 ಮೇ 2024, 15:28 IST
ಕುಶಾಲನಗರ ಕಾವೇರಿ ನದಿಗೆ ಕೊಳಚೆ ನೀರು ಹರಿದು ದುರ್ವಾಸನೆ ಬೀರುತ್ತಿದೆ.
ಕುಶಾಲನಗರ ಕಾವೇರಿ ನದಿಗೆ ಕೊಳಚೆ ನೀರು ಹರಿದು ದುರ್ವಾಸನೆ ಬೀರುತ್ತಿದೆ.   

ಕುಶಾಲನಗರ: ಪಟ್ಟಣದಲ್ಲಿನ ಕೊಳಚೆ ನೀರು ನೇರವಾಗಿ ಕಾವೇರಿ ನದಿಯ ಒಡಲು ಸೇರುತ್ತಿದೆ.

ಬಿಸಿಲಿನ ತಾಪಮಾನದಿಂದ ಈಗಾಗಲೇ ಕಾವೇರಿ ನದಿಯಲ್ಲಿ ನೀರು ಸಂಪೂರ್ಣ ಕ್ಷೀಣಗೊಂಡಿದೆ. ನದಿ ದಂಡೆ ಮೇಲಿರುವ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದರ ಮಧ್ಯೆ ಕುಶಾಲನಗರ ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕೊಳಚೆ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಅಲ್ಲಲ್ಲಿ ನಿಂತಿರುವ ನೀರು ಕೊಳಚೆ ನೀರು ಮಿಶ್ರಣಗೊಂಡು ಜಲಚರ ಪ್ರಾಣಿಗಳು ಆಮ್ಲಜನಕ, ಆಹಾರದ ಕೊರತೆಯಿಂದ ಸಾವನ್ನಪ್ಪುತ್ತಿವೆ. ಜೊತೆಗೆ ದುರ್ವಾಸನೆ ಕೂಡ ಬೀರುತ್ತಿದೆ.

 ಕೊಳಚೆ ನೀರು ನದಿಗೆ ಹರಿಯದಂತೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ADVERTISEMENT

ನಾಗರಿಕರು, ಕುಶಾಲನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.