ADVERTISEMENT

ಆನೆ ದಾಳಿಗೆ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 13:02 IST
Last Updated 28 ಜನವರಿ 2021, 13:02 IST
ಆನೆ ದಾಳಿಗೆ ಮೃತಪಟ್ಟ ಕೊಣನೂರು ಹೋಬಳಿಯ ಚಿಕ್ಕಬೊಮ್ಮನಹಳ್ಳಿಯ ರವಿ ಪತ್ನಿ ಸುನಿತಾ ಅವರಿಗೆ ಅರಣ್ಯ ಇಲಾಖೆಯ ಪರಿಹಾರದ ಚೆಕ್ ನ್ನು ಶಾಸಕ ಎ.ಟಿ.ರಾಮಸ್ವಾಮಿ ಪತ್ನಿ ರಾಣಿ ನೀಡಿದರು.
ಆನೆ ದಾಳಿಗೆ ಮೃತಪಟ್ಟ ಕೊಣನೂರು ಹೋಬಳಿಯ ಚಿಕ್ಕಬೊಮ್ಮನಹಳ್ಳಿಯ ರವಿ ಪತ್ನಿ ಸುನಿತಾ ಅವರಿಗೆ ಅರಣ್ಯ ಇಲಾಖೆಯ ಪರಿಹಾರದ ಚೆಕ್ ನ್ನು ಶಾಸಕ ಎ.ಟಿ.ರಾಮಸ್ವಾಮಿ ಪತ್ನಿ ರಾಣಿ ನೀಡಿದರು.   

ಕೊಣನೂರು: ಹೋಬಳಿಯ ಬೆಟ್ಟಗಳಲೆ ಗ್ರಾಮದ ಬಳಿ ಕಾಡಾನೆ ದಾಳಿಗೆಚಿಕ್ಕಬೊಮ್ಮನಹಳ್ಳಿ ಗ್ರಾಮದ ರವಿ (38) ಸ್ಥಳದಲ್ಲೇ ಮೃತಪಟ್ಟಿರುವಘಟನೆ ಬುಧವಾರ ರಾತ್ರಿ ನಡೆದಿದೆ.

ರವಿ ಮತ್ತು ದಿನೇಶ್ ಸೋಮವಾರಪೇಟೆಯಲ್ಲಿ ಕಾಫಿ ಲೋಡ್ ಮಾಡಿ ರಾತ್ರಿ ವಾಪಸ್ ಬೈಕ್ ನಲ್ಲಿಚಿಕ್ಕಬೊಮ್ಮನಹಳ್ಳಿಗೆ ಬರುತ್ತಿದ್ದ ವೇಳೆ ಬೆಟ್ಟಗಳಲೆ ಸಮೀಪ ರಸ್ತೆಯಲ್ಲಿ ಆನೆ ಕಂಡಿದೆ. ಬೈಕ್‌ ನಿಲ್ಲಿಸಿ ಓಡುವಾಗರವಿ ಎಡವಿ ಬಿದ್ದರು. ಆಗ ಆನೆಯು ರವಿಯನ್ನು ತುಳಿದು ಸಾಯಿಸಿದೆ.

ಅರಣ್ಯ ಇಲಾಖೆ ವತಿಯಿಂದ ₹ 2 ಲಕ್ಷ ಮೊತ್ತದ ಪರಿಹಾರದ ಚೆಕ್‌ ಅನ್ನು ಮೃತರ ಪತ್ನಿ ಸುನೀತಾರಿಗೆನೀಡಲಾಯಿತು.

ADVERTISEMENT

‘ಮೃತರ ಪತ್ನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಪಿಂಚಣಿಯನ್ನು ಐದು ವರ್ಷಗಳವರೆಗೆನೀಡಲಾಗುವುದು. ದಾಖಲಾತಿ ಪಡೆದುಕೊಂಡ ಬಳಿಕ ಬಾಕಿ ₹ 5.5 ಲಕ್ಷ ಪರಿಹಾರದ ಹಣವನ್ನು ಶೀಘ್ರದಲ್ಲಿ ನೀಡಲಾಗವುದು’ ಎಂದು ಸಕಲೇಶಪುರ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.