ADVERTISEMENT

ಹೆತ್ತೂರು | ಬಾರಿ ಮಳೆ: ರಾಜ್ಯ ಹೆದ್ದಾರಿ ಪಕ್ಕದ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:02 IST
Last Updated 6 ಸೆಪ್ಟೆಂಬರ್ 2025, 2:02 IST
ಹೆತ್ತೂರು ಹೋಬಳಿಯ ವನಗೂರು ಗ್ರಾಮದ ಸಮೀಪ ರಾಜ್ಯ ಹೆದ್ದಾರಿ 85ರಲ್ಲಿ ರಸ್ತೆ ಕುಸಿದಿರುವುದು.
ಹೆತ್ತೂರು ಹೋಬಳಿಯ ವನಗೂರು ಗ್ರಾಮದ ಸಮೀಪ ರಾಜ್ಯ ಹೆದ್ದಾರಿ 85ರಲ್ಲಿ ರಸ್ತೆ ಕುಸಿದಿರುವುದು.   

ಹೆತ್ತೂರು: ಮಲೆನಾಡು ಯಸಳೂರು, ಹೆತ್ತೂರು ಹೋಬಳಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಕ್ಷೀಣಿಸಿದ್ದ ಮಳೆ, ಸಂಜೆಯಿಂದ ಮತ್ತೆ ಚುರುಕುಗೊಂಡಿದೆ.

ಕಳೆದ ವಾರದಿಂದ ಮಳೆ ಬಿಡುವಿಲ್ಲದೇ ಸುರಿದಿದ್ದು, ಶುಕ್ರವಾರ ಬೆಳೆಗಿನ ಜಾವ ಬಿಸಿಲು ಬಿದ್ದಿತ್ತು. ಮಧ್ಯಾಹ್ನದ ನಂತರ ಆರಂಭವಾದ ಮಳೆ, ಒಂದು ಗಂಟೆಗೂ ಅಧಿಕ ಕಾಲ ಜೋರಾಗಿ ಸುರಿಯಿತು.

ನಿರಂತರ ಮಳೆ ಸುರಿಯುತ್ತಿರುವುದರಿಂದ ಬಿಸ್ಲೆ- ವನಗೂರು ಕೂಡುರಸ್ತೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 85ರಲ್ಲಿ ವನಗೂರು ಗ್ರಾಮದ ಬಳಿ ರಸ್ತೆ ಕುಸಿದಿದ್ದು. ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಮಳೆ ಹೀಗೆ ಮುಂದುವರಿದರೆ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಬ್ಯಾರಿಕೇಡ್ ಇಡಲಾಗಿದೆ.

ಸೋಮವಾರದಿಂದ ಗುರುವಾರ ಬೆಳಿಗ್ಗೆ ಶುಕ್ರವಾರ ಬೆಳಿಗಿನವರೆಗೆ ಹೋಬಳಿಯ ಸಿಂಕೇರಿ ಗ್ರಾಮದಲ್ಲಿ 3.85 ಸೆಂ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.