ಹೊಳೆನರಸೀಪುರ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಎಚ್.ಕೆ. ಲಕ್ಷ್ಮಣ್ ಹಾಗೂ ಉಪಾಧ್ಯಕ್ಷರಾಗಿ ಎಚ್.ಎನ್. ಪ್ರೇಮ್ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಶಶಿಕುಮಾರ್, ಸೋಮೇಗೌಡ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಲಕ್ಷ್ಮಣ್, ಪ್ರೇಮ್ ಸ್ಪರ್ಧಿಸಿದ್ದರು. ಲಕ್ಷ್ಮಣ್, ಪ್ರೇಮ್ ಅವರು ತಲಾ 8 ಮತಗಳನ್ನು ಪಡೆದು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಸಹಾಯಕ ನಿಬಂಧಕ ಬಾಲಚಂದ್ರ ಕಾರ್ಯ ನಿರ್ವಹಿಸಿದರು.
ಬ್ಯಾಂಕ್‌ನ ಸದಸ್ಯರಾದ ಕಲ್ಲೇನಹಳ್ಳಿಯ ಪದ್ಮರಾಜು, ಕುಂಕುಮದ ಹೊಸೂರಿನ ಪುಟ್ಟಮ್ಮ, ತೆರಣ್ಯದ ರಜಿನಿ, ಹೂವಿನಹಳ್ಳಿಯ ಶಶಿಕುಮಾರ್, ಹಂಗರಹಳ್ಳಿಯ ಲಕ್ಷ್ಮಣ, ಗುಂಜೇವಿನ ಜಿ.ಕೆ.ನಂದಕುಮಾರ್, ಆಲದಹಳ್ಳಿಯ ಎ.ಡಿ.ಸಿಂಗ್ರೀಗೌಡ, ಪಡುವಲಹಿಪ್ಪೆಯ ಪುರುಷೋತ್ತಮ್, ಪಟ್ಟಣದ ಬಿ.ಎಂ.ರಸ್ತೆಯ ಪ್ರೇಮ್ ಗಾಳಿಪುರದ ಲೋಕೇಶ್ ದೊಡ್ಡಹಳ್ಳಿಯ ಸಣ್ಣತಮ್ಮಯ್ಯ, ಬಿದರಕ್ಕದ ಶಿವಣ್ಣನಾಯಕ, ಟಿ. ಮಾಯಗೋಡನಹಳ್ಳಿಯ ನೇತ್ರಪಾಲ್ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಸೂರನಹಳ್ಳಿಯ ಸೋಮೇಗೌಡ ಹಾಗೂ ನಾಮ ನಿರ್ದೇಶನ ಸದಸ್ಯ ರಾಮೇನಹಳ್ಳಿಯ ಮೂರ್ತಿ ಸೇರಿದಂತೆ 15 ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಸೂರನಹಳ್ಳಿ ಎಸ್.ಎ.ರಘು, ತಾ.ಪಂ. ಮಾಜಿ ಅಧ್ಯಕ್ಷ ಜವರೇಗೌಡ, ಗಂಗೂರು ಗ್ರಾ.ಪಂ. ಸದಸ್ಯ ಮಂಜು ಶಾಂತೇಗೌಡ, ಪಡುವಲಹಿಪ್ಪೆ ಪುರುಷೋತ್ತಮ್, ವಹಾಬ್ ಶುಭ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.