ADVERTISEMENT

ಹೊಳೆನರಸೀಪುರ | ಚಿರತೆ ದಾಳಿ; ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 14:33 IST
Last Updated 11 ಆಗಸ್ಟ್ 2024, 14:33 IST
ಹೊಳೆನರಸೀಪುರ ತಾಲೂಕಿನ ಬಾಚನಹಳ್ಳಿಯ ಕಬ್ಬಿನ ಗದ್ದೆಯಲ್ಲಿ ನಾಲ್ಕು ಚಿರತೆ ಮರಿಗಳು ಕಂಡುಬಂದಿವೆ.
ಹೊಳೆನರಸೀಪುರ ತಾಲೂಕಿನ ಬಾಚನಹಳ್ಳಿಯ ಕಬ್ಬಿನ ಗದ್ದೆಯಲ್ಲಿ ನಾಲ್ಕು ಚಿರತೆ ಮರಿಗಳು ಕಂಡುಬಂದಿವೆ.   

ಹೊಳೆನರಸೀಪುರ: ತಾಲ್ಲೂಕಿನ ಕೆರಗೋಡು ಗೋಪನಹಳ್ಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ನವೀನ್(24) ಎಂಬವರ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ.

 ಹಳ್ಳಿಮೈಸೂರು ಹೋಬಳಿಯ ನವೀನ್‌  ಕುಡುಗೋಲು ಹಿಡಿದು ಕೆಲಸ ಮಾಡುತ್ತಿದ್ದಾಗ ಮೇಲೆರಗಿದ ಚಿರತೆಯತ್ತ ಕುಡುಗೋಲಿನಿಂದ ಪ್ರತಿದಾಳಿ ನಡೆಸಿದ್ದರು, ಆಗ ಅವರ ಕಾಲಿಗೆ ಕಚ್ಚಿ ಗಾಯಗೊಳಿಸಿದೆ.   ಅಕ್ಕಪಕ್ಕದ ರೈತರು ಬಂದಾಗ  ಚಿರತೆ ಓಡಿ ಹೋಗಿದೆ. ನವೀನ್‌ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ  ಭೇಟಿ ನೀಡಿ ಮಾಡಿತಿ ಪಡೆದರು.

ತಾಲೂಕಿನ ಬಾಚನಹಳ್ಳಿಯ ಕಬ್ಬಿನ ಗದ್ದೆಯಲ್ಲಿ ನಾಲ್ಕು ಚಿರತೆ ಮರಿಗಳನ್ನು ಕಂಡ ರೈತರು ಆತಂಕಗೊಂಡಿದ್ದು, ಜಮೀನಿಗೆ ತೆರಳಲು ಭಯ ವ್ಯಕ್ತಪಡಿಸಿದ್ದಾರೆ.   ವಲಯ ಅರಣ್ಯಾಧಿಕಾರಿ ದಿಲೀಪ್ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.  ಬೋನ್ ಇಟ್ಟು ಚಿರತೆ ಸೆರೆಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು   ದಿಲೀಪ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.