ADVERTISEMENT

ಹಾಸನ: ಕೊಟ್ಟಿಗೆ ಸೇರಿರುವ ಚಿರತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 13:53 IST
Last Updated 14 ಜುಲೈ 2023, 13:53 IST
   

ಹಾಸನ: ತಾಲ್ಲೂಕಿನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರ ದನದ ಕೊಟ್ಟಿಗೆಗೆ ಚಿರತೆಯೊಂದು ನುಗ್ಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಹೊಸಹಳ್ಳಿ ಗ್ರಾಮದ ತಮ್ಮ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಧರ್ಮ ಅವರು, ಮನೆಯ ಪಕ್ಕದಲ್ಲಿಯೇ ಕೊಟ್ಟಿಗೆ ನಿರ್ಮಿಸಿದ್ದರು.

ಆಹಾರ ಅರಸಿ ಬಂದಿರುವ ಚಿರತೆ, ಕೊಟ್ಟಿಗೆ ಒಳಗೆ ನುಗ್ಗಿದೆ. ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟಲಾಗಿದ್ದು, ಅಲ್ಲಿಯೇ ಚಿರತೆ ಅಡಗಿ ಕುಳಿತಿದೆ.

ADVERTISEMENT

ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಬಂದಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.