ADVERTISEMENT

‘ನಾಡು, ನುಡಿ ಮೇಲೆ ಅಭಿಮಾನವಿರಲಿ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 1:57 IST
Last Updated 14 ನವೆಂಬರ್ 2025, 1:57 IST
ಚನ್ನರಾಯಪಟ್ಟದ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಜಾನಪದ ನೃತ್ಯ ಮಾಡಿದರು
ಚನ್ನರಾಯಪಟ್ಟದ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಜಾನಪದ ನೃತ್ಯ ಮಾಡಿದರು   

ಚನ್ನರಾಯಪಟ್ಟಣ: ಕನ್ನಡ ನಾಡು, ನುಡಿ ಮೇಲೆ ಸದಾ ಅಭಿಮಾನ ಇರಬೇಕು ಎಂದು ಟೈಮ್ಸ್ ಪಿಯು ಕಾಲೇಜು ಉಪನ್ಯಾಸಕ ಎಚ್.ಎಂ. ಶ್ರೀಕಂಠ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಪ್ರಾಚೀನ ಭಾಷೆ. ಕನ್ನಡ ನಮ್ಮ ಉಸಿರಾಗಬೇಕು. ನಮ್ಮಭಾವನೆಯನ್ನು ಸಮರ್ಪಕ ರೀತಿಯಲ್ಲಿ ವ್ಯಕ್ತಪಡಿಸಲು ಮಾತೃಭಾಷೆಯಿಂದ ಸಾಧ್ಯ’ ಎಂದರು.

ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ ಮಾತನಾಡಿ, ಕನ್ನಡ ಹೃದಯದ ಭಾಷೆಯಾಗಬೇಕು ಎಂದರು.

ADVERTISEMENT

ಸಹಾಯಕ ಪ್ರಾಧ್ಯಾಪಕ ಆರ್.ಕೆ.ಶಿವಪ್ಪ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಆಲೂರು ವೆಂಕಟರಾವ್, ಡೆಪ್ಯುಟಿ ಚನ್ನಬಸಪ್ಪ, ಗುದ್ಲೆಪ್ಪ ಹಳ್ಳಿಕೇರಿ ಸೇರಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕೀರ್ತನಾ, ಗಗನಾ (ಪ್ರಥಮ), ಚಂದನಶ್ರೀ, ಪವಿತ್ರಾ (ದ್ವಿತೀಯ), ಮಾನ್ಯಾ, ಸುಷ್ಮಾ (ತೃತೀಯ) ಬಹುಮಾನ ಪಡೆದರು. ಸಹಾಯಕ ಪ್ರಾಧ್ಯಾಪಕ ಅಜೇಯ್ ಸೇರಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಹಾಯಕ ಪ್ರಾಧ್ಯಾಪಕರಾದ ಎನ್.ಟಿ. ನಾಗರಾಜ, ಬಿ.ಎನ್. ಚಂದ್ರಶೇಖರ್, ಕಲಾವತಿ ಇದ್ದರು. 
ವಿದ್ಯಾರ್ಥಿಗಳು ಕನ್ನಡದ ಬಾವುಟ, ಭುವನೇಶ್ವರಿ ತಾಯಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಹಿಡಿದು  ಮೆರವಣಿಗೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.