ADVERTISEMENT

ಬಿಜೆಪಿ ಯಾವ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡುವುದಿಲ್ಲ: ಮಧು ಮಾದೇಗೌಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:05 IST
Last Updated 9 ಜುಲೈ 2022, 6:05 IST
 ಬೇಲೂರಿನ  ಪುರಸಭಾ ಸಂಭಾಗಣದಲ್ಲಿ ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಪೌರಸನ್ಮಾನ ಮಾಡಿ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ,  ಸದಸ್ಯರಾದ ಜಿ.ಶಾಂತಕುಮಾರ್, ಜಮಾಲುದ್ದೀನ್ ಇದ್ದರು.
 ಬೇಲೂರಿನ  ಪುರಸಭಾ ಸಂಭಾಗಣದಲ್ಲಿ ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಪೌರಸನ್ಮಾನ ಮಾಡಿ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ,  ಸದಸ್ಯರಾದ ಜಿ.ಶಾಂತಕುಮಾರ್, ಜಮಾಲುದ್ದೀನ್ ಇದ್ದರು.   

ಬೇಲೂರು: ‘ಬಿಜೆಪಿ ಸರ್ಕಾರ ಪಿಎಸ್ಐ ನೇಮಕಾತಿಯಲ್ಲಿ ಹಗರಣ ನಡೆಸಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿ ಸೇರಿದಂತೆ ಈ ಸರ್ಕಾರ ಯಾವ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸುತ್ತದೆ ಎಂಬ ನಂಬಿಕೆ ಇಲ್ಲ’ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಹೇಳಿದ್ದಾರೆ.

ಇಲ್ಲಿನ ಪುರಸಭಾ ಸಂಭಾಗಣದಲ್ಲಿ ಮಧು.ಜಿ.ಮಾದೇಗೌಡ ಅವರಿಗೆ ಪುರಸಭೆವತಿಯಿಂದ ಶುಕ್ರವಾರ ಸನ್ಮಾನ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ₹12 ಸಾವಿರ, ಸಂಬಳವನ್ನು ₹20 ಸಾವಿರಕ್ಕೆ ಏರಿಸುವಂತೆ ಸದನದಲ್ಲಿ ಪ್ರಸ್ತಾಪಿಸಲಾಗುವುದು, ಶಿಕ್ಷಕರ ಸಮಸ್ಯೆಗಳನ್ನು ಪರಿಹಾರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ADVERTISEMENT

ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳ ಮತದಾರರು ನನಗೆ ಬಹುಮತ ನೀಡಿದ್ದಾರೆ, ಮತದಾರರಿಗೆ ಹಾಗೂ ನನ್ನ ಗೆಲುವಿಗೆ ಹೋರಾಟ ನಡೆಸಿದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಬೇಲೂರಿನಲ್ಲಿ ಕಾಂಗ್ರೆಸ್ ಉತ್ತಮ ಸಂಘಟನೆ ಮಾಡಿಕೊಂಡು ಸದೃಢವಾಗಿದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೇಲೂರಿನಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ನಾನು ಬದ್ಧನಾಗಿದ್ದೇನೆ ಎಂದರು.

ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ, ಸದಸ್ಯರಾದ ಜಿ.ಶಾಂತಕುಮಾರ್, ಜಮಾಲುದ್ದೀನ್ ಬಿ.ಗಿರೀಶ್, ಅಶೋಕ್,

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜೆ. ನಿಶಾಂತ್, ಜಿ.ಪಂ. ಮಾಜಿ ಸದಸ್ಯ ಸೈಯದ್ ತೌಫಿಕ್, ಮುಖಂಡರಾದ ಇಕ್ಬಾಲ್, ರಂಗನಾಥ್, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.