ಅರಸೀಕೆರೆ: ತಾಲ್ಲೂಕಿನ ಯಳವಾರೆ ಗ್ರಾಮದೇವತೆ ಶ್ರೀ ಹುಚ್ಚಮ್ಮ ದೇವಾಲಯದಲ್ಲಿ ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರೆವೇರಿತು.
ಯಾದಾಪುರದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಗ್ರಾಮದ ಹುಚ್ಚಮ್ಮ ದೇವಿ, ಚೆಲುವರಾಯಸ್ವಾಮಿ, ದೂತರಾಯ ಸ್ವಾಮಿ, ಹಾರನ ಹಳ್ಳಿಯ ಶ್ರೀ ಕೊಡಮ್ಮ ದೇವಿ, ಧೂತರಾಯ ಸ್ವಾಮಿ ಸಾನಿಧ್ಯದಲ್ಲಿ ಬೆಳಿಗ್ಗೆ ಗಣಪತಿ ಸಂಕಲ್ಪ, ಪೂಜಾ ಪುಣ್ಯಾಹಃ, ದೇವಿಯವರಿಗೆ ಅಭಿಷೇಕ, ಕಳಶ ಸ್ಥಾಪನೆ, ಮಂಡಲ ರಚನೆ, ಅರ್ಚನೆ ನಡೆದವು.
ಹಾಸನದ ವೇದ ಬ್ರಹ್ಮ ಎಂ. ವಿ. ಕೃಷ್ಣಮೂರ್ತಿ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ಯಳವಾರೆ ಹುಚ್ಚಮ್ಮ ದೇವಿ ಸಮಿತಿ ಟ್ರಸ್ಟ್ ಹಾಗೂ ಭಕ್ತಾದಿಗಳ ಸಹಕಾರದಿಂದ ಹೋಮ ನಡೆಸಿದರು. ಯಳವಾರೆ ಚೆಲುವರಾಯಸ್ವಾಮಿ , ಹಾರನಹಳ್ಳಿ ದೂತರಾಯ ಸ್ವಾಮಿ ದೇವರುಗಳ ಕುಣಿತವು ಎಲ್ಲರ ಗಮನ ಸೆಳೆಯಿತು. ಅರೆ ವಾದ್ಯ ಹಾಗೂ ಕರಡೆ ವಾದ್ಯ ಉತ್ಸವಕ್ಕೆ ಮೆರಗು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.