ADVERTISEMENT

ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 3:04 IST
Last Updated 10 ಅಕ್ಟೋಬರ್ 2025, 3:04 IST
ಹೆತ್ತೂರು ಗ್ರಾಮದಲ್ಲಿ ಸುರಿದ ಮಳೆಗೆ ಐಗೂರು - ಹೆತ್ತೂರು ಸಂಪರ್ಕಿಸುವ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿರುವುದು
ಹೆತ್ತೂರು ಗ್ರಾಮದಲ್ಲಿ ಸುರಿದ ಮಳೆಗೆ ಐಗೂರು - ಹೆತ್ತೂರು ಸಂಪರ್ಕಿಸುವ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿರುವುದು   

ಹೆತ್ತೂರು: ಯಸಳೂರು, ಹೆತ್ತೂರು ಹೋಬಳಿಯ ವಿವಿಧ ಭಾಗಗಳಲ್ಲಿ ಬುಧವಾರ ಧಾರಾಕಾರ ಮಳೆ ಸುರಿಯಿತಿ. ಬೆಳಿಗ್ಗೆಯಿಂದ ಬಿಸಿಲು ಇದ್ದು, ಮಧ್ಯಾಹ್ನ ನಂತರ ಮೋಡದ ವಾತಾವರಣ ಶುರುವಾಯಿತು.

ಸಂಜೆ 4 ಗಂಟೆ ನಂತರ ಹಾಡ್ಯ, ಲಕ್ಷ್ಮೀ ಪುರದಲ್ಲಿ ಆರಂಭವಾದ‌ ಮಳೆಯು ಗುರುವಾರ ಬೆಳಿಗ್ಗೆ 3 ಗಂಟೆ ಸಮಯದಲ್ಲಿ ಒಂದು‌ ಗಂಟೆಗೂ ಅಧಿಕ ಕಾಲ ರಭಸವಾಗಿ ಸುರಿಯಿತು. ಚರಂಡಿಗಳೆಲ್ಲವೂ ಉಕ್ಕಿ ಹರಿಯುವಂತಾಯಿತು.

ಧಾರಾಕಾರ ಮಳೆಯಿಂದಾಗಿ ಅರೇಬಿಕಾ ಕಾಫಿಗೆ ಹೊಡೆತ ಬಿದ್ದಿದ್ದು, ಹಣ್ಣಾಗುತ್ತಿದ್ದ ಕಾಫಿ ನೆಲ‌ಕಚ್ಚುವಂತೆ ಮಾಡಿದೆ. ರೊಬಸ್ಟಾ ಕಾಫಿಗೆ ಕೊಳೆ ರೋಗ ಬರುತ್ತಿದೆ.

ADVERTISEMENT

‘ಈ ಮಳೆಯು ಕಾಫಿ ಬೆಳೆಗೆ ಮಾರಕವಾಗಿದೆ. ಕಳೆದ ವಾರ‌ದ‌ ಬಿಸಿಲಿಗೆ ಅರೇಬಿಕಾ ಕಾಯಿ ಬಲಿತಿತ್ತು. ಈಗ ಮಳೆಯಾಗಿದ್ದರಿಂದ ಕೂಡಲೇ ಹಣ್ಣಾಗುತ್ತದೆ. ಮಳೆ ಮುಂದುವರಿದರೆ ಕೊಯ್ಲಿಗೆ ಕಷ್ಟವಾಗುತ್ತದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಎಚ್.ಬಿ ಪವನ್.

ಹೋಬಳಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಕೆಗೆ ನೆಲ ಅಗೆದಿದ್ದು, ರಸ್ತೆಗಳು ಕೆಸರುಮಯವಾಗಿವೆ. ಇದರಿಂದ ನಿವಾಸಿಗಳು ಸಂಕಷ್ಟ ಪಡುವಂತಾಯಿತು. ಹೆತ್ತೂರು ಗ್ರಾಮದಲ್ಲಿ ಬುಧವಾರ 5 ಸೆಂ.ಮೀ. ಮಳೆಯಾಗಿದೆ. ಈ ವರ್ಷ ಇದುವರೆಗೆ ಗ್ರಾಮದಲ್ಲಿ 447.5 ಸೆಂ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.