ಪ್ರಾತಿನಿಧಿಕ ಚಿತ್ರ
ಹಳೇಬೀಡು: ಪತ್ನಿ ಸಾವಿನಿಂದ ಮನನೊಂದ ವ್ಯಕ್ತಿ ಶನಿವಾರ ದ್ವಾರಸಮುದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋನ್ನಾಥಪುರ ಬೋವಿ ಕಾಲೊನಿ ನಿವಾಸಿ ಮಲ್ಲೇಶ್ (28) ಮೃತರು.
ಎರಡು ತಿಂಗಳ ಹಿಂದೆ ಪತ್ನಿ ಸಾವಿತ್ರಿ ಅನಾರೋಗ್ಯದಿಂದ ನಿಧನರಾಗಿದ್ದರು. ಸೋಮವಾರಪೇಟೆಯಲ್ಲಿ ಶುಂಠಿ ಕೆಲಸಕ್ಕೆ ತೆರಳಿದ್ದ ಮಲ್ಲೇಶ್ ಶುಕ್ರವಾರ ಊರಿಗೆ ಬಂದಿದ್ದರು. ತಂದೆ, ತಾಯಿಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹಳೇಬೀಡಿಗೆ ಬಂದಿದ್ದ ಅವರು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಲೂರಿನಿಂದ ಬಂದ ಅಗ್ನಿಶಾಮಕ ದಳದವರು ಶವ ಹೊರತೆಗೆದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹಳೇಬೀಡು ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.