ADVERTISEMENT

₹ 60 ಸಾವಿರ ಮೌಲ್ಯದ ಗಾಂಜಾ ಗಿಡ ವಶ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 2:02 IST
Last Updated 12 ಸೆಪ್ಟೆಂಬರ್ 2020, 2:02 IST
ಗಾಂಜಾ ಗಿಡವನ್ನು ಶುಕ್ರವಾರ ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು
ಗಾಂಜಾ ಗಿಡವನ್ನು ಶುಕ್ರವಾರ ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು   

ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಹೋಬಳಿ ದಿಡಗ ತುಮಕೂರು ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಅಂದಾಜು ₹ 60 ಸಾವಿರ ಮೌಲ್ಯದ 4.5 ಕೆ.ಜಿ.ಗಾಂಜಾ ಗಿಡಗಳನ್ನು ಶುಕ್ರವಾರ ವಶ ಪಡಿಸಿಕೊಳ್ಳಲಾಗಿದೆ.

ಗ್ರಾಮದ ನಾಗರಾಜು ಎಂಬುವರ ಜಮೀನಿನಲ್ಲಿ ರಾಗಿ ಮತ್ತು ಮುಸುಕಿನ ಜೋಳ ಬೆಳೆಯ ಮಧ್ಯೆ ಅಲ್ಲಲ್ಲಿ ಗಾಂಜಾ ಬೆಳೆಯಲಾಗಿತ್ತು. ಆರೋಪಿ ನಾಗರಾಜು ತಲೆ ಮರೆಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪನಿರೀಕ್ಷಕ ಎಂ.ಎಚ್.ರಘು, ವಲಯ ಅಬಕಾರಿ ನಿರೀಕ್ಷಕಿ ಎಂ.ಜೆ.ಅನಿತಾ, ಉಪನಿರೀಕ್ಷಕ ಎಚ್.ಎ.ಅಬ್ದುಲ್ ನಿಸಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.