ADVERTISEMENT

ಉಲ್ಕಾಪಾತ ವೀಕ್ಷಣೆಗೆ ವ್ಯವಸ್ಥೆ: ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:29 IST
Last Updated 12 ಡಿಸೆಂಬರ್ 2025, 2:29 IST

ಹಾಸನ: ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್) ವತಿಯಿಂದ ಅಪರೂಪದ ಉಲ್ಕಾ ಮಳೆಗಳ ನೈಸರ್ಗಿಕ ವಿದ್ಯಮಾನ ವೀಕ್ಷಣೆಗೆ ಡಿ.13 ಹಾಗೂ 14ರಂದು ತಾಲ್ಲೂಕಿನ ನಿಟ್ಟೂರು ಗ್ರಾಮದ ತಿರುಪತಿ ಹಳ್ಳಿ ಬೆಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತೀಯ ಜ್ಙಾನ ವಿಜ್ಞಾನ ಸಮಿತಿ, ನಿಟ್ಟೂರು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಒಂದು ಗಂಟೆಗೆ ಸುಮಾರು 20ರಿಂದ 25ಕ್ಕೂ ಹೆಚ್ಚು ಉಲ್ಕೆಗಳು ಬೀಳುವ ಸಾಧ್ಯತೆ ಇದೆ. ಈ ವಿಸ್ಮಯವನ್ನು ವೀಕ್ಷಿಸಲು ಖಗೋಳ ವಿಜ್ಞಾನ ಆಸಕ್ತರು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಸಂಪನ್ಮೂಲ ವ್ಯಕ್ತಿ ಕೆ.ಎಸ್, ರವಿಕುಮಾರ್ ಅವರು ಆಕಾಶ ಮತ್ತು ಆರೋಗ್ಯದ ಕುರಿತು ಮತ್ತು ಕೆ.ವಿ ಕವಿತಾ ಅವರು ಸೌರವ್ಯೂಹದ ಅದ್ಭುತ ಸೃಷ್ಟಿ ಹಾಗೂ ಉಲ್ಕಾಪಾತಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ತುಮಕೂರು ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಸಮನ್ವಯಾಧಿಕಾರಿ ರವಿಶಂಕರ್ ಹಾಗೂ ಉದ್ಯಮಿ ಅಖಿಲೇಶ್ ಪಾಟೀಲ್ ಟೆಲಿಸ್ಕೋಪಿನ ಮೂಲಕ ಗ್ರಹ ಉಪಗ್ರಹ ಹಾಗೂ ಗ್ಯಾಲಕ್ಸಿ ತೋರಿಸಿ ವಿವರಿಸುವ ಹಾಗೂ ಸೌರವ್ಯೂಹದ ಆಟಗಳನ್ನು ಆಡಿಸಲಿದ್ದಾರೆ. ಅಹಮದ್ ಹಗರೆ, ರಾಶಿ, ಜನ್ಮ ನಕ್ಷತ್ರಗಳ ಪತ್ತೆ ಹಚ್ಚುವಿಕೆ ತಿಳಿಸುವರು. ಲೋಲಾಕ್ಷಿ, ಪ್ರಮೀಳಾ, ಮೌನಿಕ, ಜಾನಕಿ ಹಾಗೂ ರವಿ ಅವರು ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಡಲಿದ್ದಾರೆ’ ಎಂದರು.

ADVERTISEMENT

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಉದ್ಘಾಟಿಸಲಿದ್ದು, ಮಾಜಿ ಅಧ್ಯಕ್ಷ ಚಂದ್ರಶೇಖರ್, ಪಿಡಿಒ ಅಶ್ವತ್ಥ ನಾರಾಯಣ್, ಗ್ರಾಮಸ್ಥ ಶಿವಶಂಕರಪ್ಪ, ಬಿಜೆವಿಎಸ್ ಗೌರವಾಧ್ಯಕ್ಷೆ ಡಾ.ಎ. ಸಾವಿತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಿತಿಯಿಂದ ನೂರು ಜನರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಹಾಸನದಿಂದ ಪ್ರಯಾಣ, ಉಪಹಾರ, ಸರಳ ಸಂಪನ್ಮೂಲ ಪರಿಕರಗಳನ್ನು ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗೆ 6363907441, 94489 00181 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಅಹಮದ್ ಹಗರೆ, ಜಾನಕಿ, ಮೋನಿಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.