ಸಾಂದರ್ಭಿಕ ಚಿತ್ರ
ಅರಕಲಗೂಡು: ಬರಪೀಡಿತ ತಾಲ್ಲೂಕುಗಳಲ್ಲಿ ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಬೇಕು ಎಂಬ ಇಲಾಖೆಯ ಸೂಚನೆಯಂತೆ ತಾಲ್ಲೂಕಿನಲ್ಲಿ 262 ಬಿಸಿಯೂಟ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ತಿಳಿಸಿದ್ದಾರೆ.
ಏ. 11 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಭಾನುವಾರ ಹೊರತುಪಡಿಸಿ 41 ದಿನಗಳ ಕಾಲ ಬಿಸಿಯೂಟ ನೀಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಿಂಗಯ್ಯ ಅವರನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದು, ಇಸಿಒಗಳು ಹೋಬಳಿ ಮೇಲ್ವಿಚಾರಕರಾಗಿ, ಸಿಆರ್‌ಪಿಗಳು ಕ್ಲಸ್ಟರ್ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುವರು ಎಂದು ಹೇಳಿದ್ದಾರೆ.
62 ಶಾಲೆಗಳನ್ನು ಸಮೀಪದ ಬಿಸಿಯೂಟ ಕೇಂದ್ರಗಳಿಗೆ ಟ್ಯಾಗ್ ಮಾಡಲಾಗಿದೆ. 385 ಅಡುಗೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು 11,144 ವಿದ್ಯಾರ್ಥಿಗಳು ಯೋಜನೆಯ ಪ್ರಯೋಜನ ಪಡೆಯಲಿರುವುದಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.