ಹಾಸನ: ತಾಲ್ಲೂಕಿನ ಕೊರವಂಗಲ ಗ್ರಾಮದಲ್ಲಿ ಶನಿವಾರ ನೀರಿನ ಹೊಂಡದಲ್ಲಿ ಮುಳುಗಿ ತಾಯಿ, ಮಗು ಮೃತಪಟ್ಟಿದ್ದಾರೆ.
ಜಾನುವಾರುಗಳಿಗೆ ನೀರು ಕುಡಿಸಲೆಂದು ಶೃತಿ ತನ್ನ ನಾಲ್ಕು ವರ್ಷದ ಮಗುನಿಷಾಂತ್‌ನನ್ನು ಎತ್ತಿಕೊಂಡು ಹೋಗಿದ್ದರು.ಈ ವೇಳೆ ಹೊಂಡಕ್ಕೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಾನುವಾರುಗಳ ನೀರಿನ ದಾಹ ತಣಿಸಲು ಹೋಗಿ ಮೃತಪಟ್ಟ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.