ADVERTISEMENT

31ರಿಂದ ಮಂಗಳೂರಿನಲ್ಲಿ ಮುಸ್ಲಿಂ ಸಮಾವೇಶ: ಧರ್ಮೇಶ್

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:40 IST
Last Updated 29 ಮೇ 2022, 4:40 IST
ಮಂಗಳೂರಿನಲ್ಲಿ ನಡೆಯುವ ಮುಸ್ಲಿಂ ಸಮಾವೇಶದ ಪೋಸ್ಟರ್ ಅನ್ನು ಸಿಪಿಎಂ ಕಾರ್ಯದರ್ಶಿ ಧರ್ಮೇಶ್ ಬಿಡುಗಡೆ ಮಾಡಿದರು. ಮುಬಶಿರ್ ಅಹಮದ್, ಅಬ್ದುಲ್ ರಬ್, ಜಮೀರ್ ಖಾನ್ ಇದ್ದಾರೆ
ಮಂಗಳೂರಿನಲ್ಲಿ ನಡೆಯುವ ಮುಸ್ಲಿಂ ಸಮಾವೇಶದ ಪೋಸ್ಟರ್ ಅನ್ನು ಸಿಪಿಎಂ ಕಾರ್ಯದರ್ಶಿ ಧರ್ಮೇಶ್ ಬಿಡುಗಡೆ ಮಾಡಿದರು. ಮುಬಶಿರ್ ಅಹಮದ್, ಅಬ್ದುಲ್ ರಬ್, ಜಮೀರ್ ಖಾನ್ ಇದ್ದಾರೆ   

ಹಾಸನ: ‘ಮಂಗಳೂರಿನ ಪುರಭವನದಲ್ಲಿ ಮೇ 31 ಮತ್ತು ಜೂನ್ 1ರಂದು ಮುಸ್ಲಿಂಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಿಪಿಎಂ ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು.

ಜಾತ್ಯಾತೀತತೆ, ಸಬಲೀಕರಣ ಮತ್ತು ಮುನ್ನಡೆ ಎಂಬ ಘೋಷಣೆಯೊಂದಿಗೆಏರ್ಪಡಿಸಿರುವ ಸಮಾವೇಶವನ್ನು ಕೇರಳ ಮಾಜಿ ಸಚಿವ ಡಾ. ಕೆ.ಟಿ.ಜಲೀಲ್ ಉದ್ಘಾಟಿಸಲಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಧ್ಯಕ್ಷಮಾವಳ್ಳಿ ಶಂಕರ್, ಸಾಹಿತಿ ಡಾ. ಕೆ. ಶರೀಫ್ ಭಾಗವಹಿಸಲಿದ್ದಾರೆ. ಕರ್ನಾಟಕದಲ್ಲಿಕೋಮುವಾದ ಮತ್ತು ಮುಸ್ಲಿಮರ ಸ್ಥಿತಿಗತಿ ಕುರಿತು ನಡೆಯುವ ಗೋಷ್ಠಿಯಲ್ಲಿ ನಿವೃತ್ತಪ್ರಾಧ್ಯಾಪಕ ಡಾ. ಕೆ.ಚಂದ್ರ ಪೂಜಾರಿ, ಪತ್ರಕರ್ತ ಬಿ.ಎಂ. ಹನೀಫ್ ಮತ್ತುಚಿಂತಕ ಬಿ. ಪೀರ್ ಬಾಷಾ ವಿಷಯ ಮಂಡಿಸಲಿದ್ದಾರೆ ಎಂದು ಶನಿವಾರಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಸಹಾಯಕ, ದಮನಿತ, ಆಳುವ ಜನಗಳ ಅನಾದರಕ್ಕೆ ಗುರಿಯಾದ ಮುಸ್ಲಿಂಸಮುದಾಯದ ನೈಜ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಬೇಕು. ನೋವು, ನಲಿವು, ಅಪಪ್ರಚಾರದ ವಾಸ್ತವಗಳನ್ನು ಜನರ ಮುಂದಿಡಬೇಕು. ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ನ್ಯಾಯಯುತ ಪಾಲು ಒದಗಿಸಿಕೊಡಲು ಸಂಘಟಿತ ಪ್ರಯತ್ನ ನಡೆಸಬೇಕೆಂಬ ಉದ್ದೇಶದೊಂದಿಗೆಸಮಾವೇಶ ಹಮ್ಮಿಕೊಂಡಿದೆ’ ಎಂದರು.

ADVERTISEMENT

‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 15ರಷ್ಟಿರುವ ಮುಸ್ಲಿಂ ಸಮುದಾಯ ಪ್ರಭುತ್ವಪ್ರೇರಿತ ದ್ವೇಷ ರಾಜಕಾರಣಕ್ಕೆ ಗುರಿಯಾಗಿ ಯಾತನೆ ಅನುಭವಿಸುತ್ತಿದೆ. ಉದ್ಯೋಗ,ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಶೋಷಿತ ದಲಿತ ಸಮುದಾಯಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ವರದಿ ಅಂಕಿ ಅಂಶಗಳ ಸಹಿತ ವರದಿಮಾಡಿದೆ. ಹುಬ್ಬಳ್ಳಿ ಈದ್ಗಾ, ಬಾಬಾ ಬುಡನ್‍ಗಿರಿ, ಲವ್ ಜಿಹಾದ್ ಮುಂತಾದ ವಿವಾದಗಳ ಕಾಲದಾಟಿ ಈಗ ನೇರವಾಗಿ ಬಹಿಷ್ಕಾರ ಅಭಿಯಾನಕ್ಕೆ ಮುಸ್ಲಿಂ ದ್ವೇಷದ ರಾಜಕಾರಣತಲುಪಿದೆ. ರಾಜ್ಯದ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಿ ಹಾಕಲುಪೂರ್ತಿಯಾಗಿ ಕೋಮುವಾದದ ಮೊರೆ ಹೋಗಿದೆ’ ಎಂದು ಆರೋಪಿಸಿದರು.

‘ಹಿಜಾಬ್ ವಿವಾದದ ನಂತರ ಜಾತ್ರೆ, ಸಂತೆಗಳಲ್ಲಿ ಅವರ ಅಂಗಡಿ ಇಡಬಾರದು ಎಂಬಅಭಿಯಾನ ಸಹಜ ಸಂಬಂಧಗಳನ್ನು ಹಾಳು ಮಾಡುತ್ತಿವೆ. ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟಮುಸ್ಲಿಮರಿಗೆ, ನರಗುಂದದಲ್ಲಿ ಕೋಮುವಾದಿ ಶಕ್ತಿಗಳಿಂದಕೊಲೆಯಾದ ಅಮಾಯಕ ಯುವಕ ಸಮೀರ್‌ಗೆಸರ್ಕಾರ ಯಾವುದೇ ಪರಿಹಾರ ಧನವಿತರಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶಿರ್ ಅಹಮದ್, ಜಿಲ್ಲಾಉಪಾಧ್ಯಕ್ಷ ಅಬ್ದುಲ್ ರಬ್, ಕರ್ನಾಟಕ ವೀರ ಕನ್ನಡಿಗ ಟಿಪ್ಪು ಸೇನೆ ಜಿಲ್ಲಾ ಉಪಾಧ್ಯಕ್ಷಜಮೀರ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.