
ಸಕಲೇಶಪುರ: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ರಚಿಸಿ ನೂರು ವರ್ಷಗಳು ತುಂಬಿದ ನೆನಪಿಗೆ ಇಲ್ಲಿಯ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಸಾವಿರ ಕಂಠದಲ್ಲಿ ನಾಡಗೀತೆ’ ಹಾಡಿ ಗಮನ ಸೆಳೆದರು.
ಶಾಲೆಯ ಕಾರ್ಯದರ್ಶಿ ಅರುಣ್ ರಕ್ಷಿದಿ ಮಾತನಾಡಿ, ಕುವೆಂಪು ರಚಿಸಿರುವ ‘ಜೈ ಭಾರತ ಜನನಿಯ ತನುಜಾತೆ’ ನಾಡ ಗೀತೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಸೇರಿ ಸಾವಿರ ಕಂಠದಲ್ಲಿ ಯಶಸ್ವಿಯಾಗಿ ಹಾಡಲಾಗಿದೆ. ಇಡೀ ಶಾಲಾ ಆವರಣದಲ್ಲಿ ನಾಡಗೀತೆಯ ಗಾಯನ ಮಕ್ಕಳಲ್ಲಿ ಕನ್ನಡದ ಬಗ್ಗೆ ಉತ್ಸಾಹ ಹೆಚ್ಚಿಸಿದೆ. ಶಾಲೆ ಪ್ರಾಂಶುಪಾಲ ಸುಮಂತ್ ಭಾರ್ಗವ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ್ದಾರೆ ಎಂದರು.
ಎಲ್‌ಕೆಜಿ ಯಿಂದ 10ನೇ ತರಗತಿಯ ವರೆಗಿನ ಸುಮಾರು 1100 ವಿಧ್ಯಾರ್ಥಿಗಳು ಸುಮಾರು 70ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಿಬ್ಬಂದಿ ನಾಡಗೀತೆ ಗಾಯನದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.