ADVERTISEMENT

ಆಲೂರು | ನ್ಯಾನೊ ಯೂರಿಯಾ, ಡಿಎಪಿ ಬಳಸಿರಿ: ರಮೇಶ್‍ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 1:57 IST
Last Updated 4 ಆಗಸ್ಟ್ 2025, 1:57 IST
ಆಲೂರು ತಾಲ್ಲೂಕಿನಲ್ಲಿರುವ ರಸಗೊಬ್ಬರ ದಾಸ್ತಾನು ಗೋದಾಮಿಗೆ ಸಹಾಯಕ ಕೃಷಿ ನಿರ್ದೇಶಕ ರಮೇಶ್‍ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್‍ರೆಡ್ಡಿ, ಕೃಷಿ ಅಧಿಕಾರಿ ಮಹಾಂತೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಆಲೂರು ತಾಲ್ಲೂಕಿನಲ್ಲಿರುವ ರಸಗೊಬ್ಬರ ದಾಸ್ತಾನು ಗೋದಾಮಿಗೆ ಸಹಾಯಕ ಕೃಷಿ ನಿರ್ದೇಶಕ ರಮೇಶ್‍ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್‍ರೆಡ್ಡಿ, ಕೃಷಿ ಅಧಿಕಾರಿ ಮಹಾಂತೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಆಲೂರು: ರೈತರು ಯೂರಿಯಾ ಗೊಬ್ಬರದ ಬದಲು ದ್ರವರೂಪ ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ಬಳಕೆ ಮಾಡಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‍ ಕುಮಾರ್ ತಿಳಿಸಿದ್ದಾರೆ.

ತಾಲ್ಲೂಕಿನ ರಸಗೊಬ್ಬರ ದಾಸ್ತಾನು ಗೋದಾಮಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಮಳೆ ಜಾಸ್ತಿಯಾಗಿರುವುದರಿಂದ ಮುಸುಕಿನ ಜೋಳ, ಕಾಫಿ ಬೆಳೆಗಳಿಗೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ರೈತರು ಪುನರಾವರ್ತನೆಯಾಗಿ ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡುತ್ತಿರುವುದು ತಪ್ಪು. ಯೂರಿಯಾ ರಸಗೊಬ್ಬರದ ಬದಲು ಈಗ ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ದ್ರವರೂಪದಲ್ಲಿ ಬಂದಿದೆ. ಇದನ್ನು ಕೃಷಿಯಲ್ಲಿ ಬಳಸುವುದರಿಂದ ಶೀತವನ್ನು ತಡೆಯುತ್ತದೆ. ಇದರಿಂದ ಯೂರಿಯಾ ರಸಗೊಬ್ಬರದ ಬಳಕೆ ತಗ್ಗಿಸಬಹುದು ಎಂದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ಯೂರಿಯಾ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ADVERTISEMENT

ತಾಲ್ಲೂಕಿನಲ್ಲಿ 2,804 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಅದರಲ್ಲಿ ಈಗಾಗಲೆ 2,600 ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು ರೈತರಿಗೆ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ರಸಗೊಬ್ಬರದ ಅವಶ್ಯವಿದೆ. ಸದ್ಯದಲ್ಲೆ ಉಳಿದ ಗೊಬ್ಬರ ಬರುತ್ತದೆ. ರೈತರು ಭಯಪಡುವುದು ಬೇಡ ಎಂದರು.

ಗೋದಾಮುಗಳ ಪರಿಶೀಲನೆ ಸಂದರ್ಭದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ ಮೋಹನ್‍ರೆಡ್ಡಿ, ಕೃಷಿ ಅಧಿಕಾರಿ ಮಹಾಂತೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.