ADVERTISEMENT

ಗ್ರಾಮೀಣಾಭಿವೃದ್ಧಿಗೆ ಎನ್‌ಎಸ್‌ಎಸ್‌ ಪೂರಕ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 13:32 IST
Last Updated 6 ಮಾರ್ಚ್ 2025, 13:32 IST
ಹೊಳೆನರಸೀಪುರ ತಾಲ್ಲೂಕಿನ ಎಲೇಚಾಗಹಳ್ಳಿಯಲ್ಲಿ ಗೃಹವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿದ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು. ಆಶಾಜ್ಯೋತಿ, ಚಂದ್ರಶೇಖರಯ್ಯ, ನಂಜುಂಡಪ್ಪ ಇದ್ದರು.
ಹೊಳೆನರಸೀಪುರ ತಾಲ್ಲೂಕಿನ ಎಲೇಚಾಗಹಳ್ಳಿಯಲ್ಲಿ ಗೃಹವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿದ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು. ಆಶಾಜ್ಯೋತಿ, ಚಂದ್ರಶೇಖರಯ್ಯ, ನಂಜುಂಡಪ್ಪ ಇದ್ದರು.   

ಹೊಳೆನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಕೈಗೊಳ್ಳುವ ಕಾರ್ಯಗಳು ಈಗಾಗಲೇ ಜನರ ಮನಗೆದ್ದಿದ್ದು, ಅವರು ನಡೆಸುವ ಅರಿವಿನ ಕಾರ್ಯಕ್ರಮಗಳು ಹಳ್ಳಿಗಳ ಮುಗ್ದ ಜನರಿಗೆ ಅಗತ್ಯವಾಗಿದೆ. ಈ ಶಿಬಿರದಲ್ಲಿ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಆಯೋಜಿಸಬೇಕು. ಇದಕ್ಕೆ ಪೂರಕವಾಗಿ ಗ್ರಾಮದ ಜನರು ಸಹಕಾರ ನೀಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.

ತಾಲ್ಲೂಕಿನ ಎಲೇಚಾಗಹಳ್ಳಿಯಲ್ಲಿ ಪಟ್ಟಣದ ಗೃಹವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿಗೆ ಬಿಸಿಲಿದೆ. ಆದ್ದರಿಂದ ಹೆಚ್ಚಿಗೆ ನೀರು ಕುಡಿಯಿರಿ. ಅಗತ್ಯ ಮುಂಜಾಗ್ರತೆ ವಹಿಸಿಕೊಂಡು, ಖುಷಿಯಿಂದ ಶಿಬಿರದಲ್ಲಿ ಭಾಗಿಗಳಾಗಿರಿ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಂಜುಂಡಪ್ಪ ಮಾತನಾಡಿ, ನಮ್ಮ ಊರಿನಲ್ಲಿ ಈ ಶಿಬಿರ ಅಯೋಜಿಸಿರುವುದು ಸಂತಸದ ವಿಚಾರ. ನಿತ್ಯ ನಡೆಯುವ ಕಾರ್ಯಕ್ರಮಗಳಲ್ಲಿ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮದ ಘನತೆ ಕಾಪಾಡಬೇಕು ಎಂದು ಮನವಿ ಮಾಡಿದರು.

ಐಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿ, ಶಾಸಕರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ನಮ್ಮ ಗ್ರಾಮದಲ್ಲಿ ಆಯೋಜನೆಗೊಳ್ಳಲು ಕಾರಣೀಕರ್ತರು. ಈ ಶಿಬಿರವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.

ಪ್ರಾಂಶುಪಾಲೆ ಪ್ರೊ.ಆಶಾಜ್ಯೋತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್‍ಎಸ್‍ಎಸ್ ಅಧಿಕಾರಿ ಫಕೀರಮ್ಮ ಮುರುಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಡಾ. ಕೃಷ್ಣಮೂರ್ತಿ ಸ್ವಾಗತಿಸಿದರು. ಅಮೃತ ಮತ್ತು ತಂಡದವರು ನಿರೂಪಿಸಿದರು. ಎನ್‍ಎಸ್‍ಎಸ್ ಸಹ ಕಾರ್ಯಕ್ರಮ ಅಧಿಕಾರಿ ಜಗದೀಶ್ ವಂದಿಸಿದರು. ಗ್ರಾಮದ ಮುಖಂಡರಾದ ಮಹೇಂದ್ರ, ಗುರುಮೂರ್ತಿ, ಅಂಗಡಿ ಮಂಜಣ್ಣ, ಕಾಲೇಜಿನ ಬೋಧಕರಾದ ಗಣೇಶ್ ಆಶೋಕ್, ಎಚ್.ಕೆ. ಶ್ವೇತಾ ನಾಯ್ಕ್, ಮಧುಶ್ರಿ, ಸುನೀಲ್, ರಾಘವೇಂದ್ರ, ನಾಗೇಂದ್ರ, ಕರಿಯಪ್ಪ ಲಮಾಣಿ, ಶಿವು ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.