ADVERTISEMENT

ನುಗ್ಗೇಹಳ್ಳಿ | ‘ಮಾರುಕಟ್ಟೆ ಅಭಿವೃದ್ಧಿಗೆ ₹1.50 ಕೋಟಿ ಅನುದಾನ’

ನುಗ್ಗೇಹಳ್ಳಿ: ತೆಂಗಿನಕಾಯಿ ಸಂತೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 2:59 IST
Last Updated 17 ನವೆಂಬರ್ 2025, 2:59 IST
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಸಂತೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಸಂತೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು   

ನುಗ್ಗೇಹಳ್ಳಿ: ‘ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ವಾಣಿಜ್ಯ ಮಳಿಗೆ ಸೇರಿದಂತೆ ಮಾರುಕಟ್ಟೆಯನ್ನು  ₹1.50 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಭಾನುವಾರ ತೆಂಗಿನಕಾಯಿ ಸಂತೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 30 ವರ್ಷಗಳ ಹಿಂದೆ ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಕಾಯಿ ಸೇರಿದಂತೆ ರೈತರ ಸಂತೆ ನಡೆಯುತ್ತಿತ್ತು. ಅನಿವಾರ್ಯ ಕಾರಣಗಳಿಂದ ಸ್ಥಗಿತವಾಗಿತ್ತು. ಆದರೆ ರೈತರು ಹಾಗೂ ಕಾಯಿ ವ್ಯಾಪಾರಸ್ಥರ ಮನವಿ ಮೇರೆಗೆ ಪ್ರತಿ ಭಾನುವಾರ ತೆಂಗಿನಕಾಯಿ, ಜಾನುವಾರು ಹಾಗೂ ತರಕಾರಿ ಸೇರಿದಂತೆ ರೈತರು ಬೆಳೆದ ಎಲ್ಲಾ ಪದಾರ್ಥಗಳನ್ನು ಮಾರಾಟ ಮಾಡಲು ಸಂತೆಯ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಕಾಯಿ ವ್ಯಾಪಾರಿಗಳ ಮನವಿ ಮೇರೆಗೆ ಹೋಬಳಿ ಕೇಂದ್ರದ ಎಪಿಎಂಸಿ ಆವರಣದಲ್ಲಿ ಈ ವಾರದ ಭಾನುವಾರದಿಂದಲೇ ಅಧಿಕೃತವಾಗಿ ಸಂತೆ ಪ್ರಾರಂಭಿಸಲಾಗಿದೆ. ಬಾಗೂರು, ನುಗ್ಗೇಹಳ್ಳಿ, ಹಿರೀಸಾವೆ ಕಸಬಾ ಹೋಬಳಿ ಕೇಂದ್ರದ ವ್ಯಾಪ್ತಿಯ ರೈತರಿಗೆ ಹೊಸ ಸಂತೆ ಪ್ರಾರಂಭದಿಂದ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ಸಚಿವರಿಗೆ ಈಗಾಗಲೇ ಮನವಿ ಮಾಡಿ ಉಪ ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇನೆ. ತಾಲ್ಲೂಕು ಎಪಿಎಂಸಿಯಿಂದ ₹1 ಕೋಟಿ ಹೆಚ್ಚುವರಿಯಾಗಿ ಅನುದಾನ ನೀಡಿ ಆವರಣದಲ್ಲಿ ಹೈಟೆಕ್ ಶೌಚಾಲಯ, ಹೈ ಮಾಸ್ಟ್ ಲೈಟ್, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 30 ವರ್ಷಗಳ ನಂತರ ಸಂತೆ ಪ್ರಾರಂಭಗೊಂಡಿದ್ದು, ಶಾಸಕರು ಮೂಲ ಸೌಕರ್ಯ ಕಲ್ಪಿಸಲು ಮನವಿ ಮಾಡಿದರು.

ಗ್ರಾ.ಪಂ ಅಧ್ಯಕ್ಷ ಹೊನ್ನೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್.ಮಂಜುನಾಥ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ತಾಲ್ಲೂಕು ಕಾಯಿ ಮಾರಾಟಗಾರರ ಸಂಘದ ಅಧ್ಯಕ್ಷ ಪಿಳ್ಳಳ್ಳಿ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಆಡಳಿತ ಅಧಿಕಾರಿ ವಿಜಯಲಕ್ಷ್ಮಿ, ಗ್ರಾ.ಪಂ ಸದಸ್ಯರಾದ ಎನ್.ಎಸ್.ಮಂಜುನಾಥ್, ಎನ್.ಆರ್.ಶಿವಕುಮಾರ್, ಕೃಷಿ ಪತ್ತಿನ ನಿರ್ದೇಶಕರಾದ ಹುಲಿಕೆರೆ ಸಂಪತ್ ಕುಮಾರ್, ಪಟೇಲ್ ಕುಮಾರ್, ಮುಖಂಡರಾದ ಬಸವನಪುರ ಬೆಳ್ಳೇಕಾರ್ ಪ್ರಕಾಶ್, ಮಹಮ್ಮದ್ ಜಾವಿದ್, ಜಯ ಲಿಂಗೇಗೌಡ, ಪುಟ್ಟಸ್ವಾಮಿ, ಪ್ರಕಾಶ್, ರಮೇಶ್,
ಎನ್.ಡಿ.ಶಂಕರ್, ಕುಳ್ಳೇ ಗೌಡ, ಗೋಪಾಲ್, ಮುರಳಿ, ವರ್ತಕರಾದ ಊಪನಹಳ್ಳಿ ಪುನೀತ್, ಶೆಟ್ಟಿಹಳ್ಳಿ ಸ್ವಾಮಿ, ವಿರುಪಾಕ್ಷಪುರ ರವಿ, ಗೋಪಾಲ್, ಮುದ್ದನಹಳ್ಳಿ ರಾಮಕೃಷ್ಣ, ಬ್ಯಾಡ್ರಳ್ಳಿ ಕುಮಾರಣ್ಣ, ಬಾಣನಕೆರೆ ಮಂಜು, ಪುನೀತ್, ಹಾಸನ ಮಂಜಣ್ಣ, ಕೆಂಪೇಗೌಡ, ಪಿ.ದಾಸಪುರ ಆನಂದ್ ಇದ್ದರು.

30 ವರ್ಷಗಳ ನಂತರ ಸಂತೆ ಪ್ರಾರಂಭ ಮೂಲ ಸೌಕರ್ಯ ಕಲ್ಪಿಸಲು ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.