ಅರಸೀಕೆರೆ: ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಸಂಕಟ ಮೋಚನ ಪಾರ್ಶ್ವ ಭೈರವ ಧಾಮವು ಹಲವು ವಿಶೇಷತೆಗಳೊಂದಿಗೆ ಪ್ರಸಿದ್ಧ ಸ್ಥಳವಾಗಲಿದೆ ಎಂದು ಗೃಹ ಇಲಾಖೆ ನೂತನ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ ಹೇಳಿದರು.
ನಗರದ ಹೊರವಲಯದಲ್ಲಿರುವ ಜಾಜೂರು ಸಮೀಪದ ಸಂಕಟ ಮೋಚನ ಪಾರ್ಶ್ವ ಭೈರವ ಧಾಮಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಅರಸೀಕೆರೆ ಕ್ಷೇತ್ರವು ಸಾಕಷ್ಟು ಪುಣ್ಯ ಹಾಗೂ ಪವಿತ್ರ ಸ್ಥಳಗಳನ್ನು ಹೊಂದಿದೆ ಎಂದರು. ಈ ವೇಳೆ ಗೋ ಶಾಲೆಗೂ ಭೇಟಿ ನೀಡಿದರು.
ಅಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್ ಸುರಾನ, ಮಧುಮತಿ ಸುರಾನ, ಮುಖಂಡರಾದ ಮಾಂಗಿಲಾಲ್, ಉದ್ಯಮಿ ಚೇತನ್, ಮೆಹೆತಾ, ಚೇತನ್ ಜೈನ್, ಶ್ರೀರಾಮ್‌ಜಮದಗ್ನಿ, ಡಿವೈಎಸ್‌ಪಿ ಗೋಪಿ, ಗ್ರಾಮಾಂತರ ಇನ್‌ಸ್ಪೆಪೆಕ್ಟರ್ ಅರುಣ್ ಕುಮಾರ್, ನಾಗೇಂದ್ರ, ಸಿದ್ದೇಶ್, ಋತ್ವಿಕ್, ಗೋಶಾಲೆ ಮೇಲ್ವಿಚಾರಕ ಮೋಹನ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.