ADVERTISEMENT

ಮಿನಿ ವ್ಯಾನ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದ ಟ್ಯಾಂಕರ್; ರಸ್ತೆಗೆ ಸುರಿದ ಪೆಟ್ರೋಲ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:33 IST
Last Updated 30 ಜನವರಿ 2023, 4:33 IST
ನಾಗರಳ್ಳಿ ಕಟ್ಟೆಯ ಬಳಿ ಉರುಳಿ ಬಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್‌ ಸೋರಿ ಹೋಯಿತು.
ನಾಗರಳ್ಳಿ ಕಟ್ಟೆಯ ಬಳಿ ಉರುಳಿ ಬಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್‌ ಸೋರಿ ಹೋಯಿತು.   

ಗಂಡಸಿ (ಅರಸೀಕೆರೆ): ಸಮೀಪದ ನಾಗರಳ್ಳಿಕಟ್ಟೆಯ ಬಳಿ ಪೆಟ್ರೋಲ್‌ ಟ್ಯಾಂಕರ್‌ ಹಾಗೂ ಮಿನಿ ವ್ಯಾನ್‌ ಮಧ್ಯೆ ಡಿಕ್ಕಿಯಾಗಿದ್ದು, ಟ್ಯಾಂಕರ್‌ ಉರುಳಿ ಬಿದ್ದಿತ್ತು.

ತಿಪಟೂರು ಕಡೆಯಿಂದ ಬರುತ್ತಿದ್ದ ಮಿನಿ ವ್ಯಾನ್‌ ಹಾಗೂ ಹಾಸನದಿಂದ ಬರುತ್ತಿದ್ದ ಟ್ಯಾಂಕರ್‌ ಮಧ್ಯೆ ಭಾನುವಾರ ಸಂಜೆ ಅಪಘಾತ ನಡೆದಿದ್ದು, ಉರುಳಿ ಬಿದ್ದ ಟ್ಯಾಂಕರ್‌ನಿಂದ 20 ಸಾವಿರ ಲೀಟರ್‌ ಪೆಟ್ರೋಲ್‌ ವ್ಯರ್ಥವಾಗಿ ಹರಿಯಿತು. ವಿಷಯ ತಿಳಿದ ಸುತ್ತಲಿನ ಗ್ರಾಮಗಳ ಜನರು, ಪಾತ್ರೆ, ಡಬ್ಬಗಳಲ್ಲಿ ಪೆಟ್ರೋಲ್‌ ತುಂಬಿಕೊಳ್ಳಲು ಮುಗಿ ಬಿದ್ದರು. ಕೆಲವು ಪೆಟ್ರೋಲ್‌ ತೆಗೆದುಕೊಂಡು ಹೋದರು.

ಅನಾಹುತ ಆಗುವ ಸಾಧ್ಯತೆ ಇದ್ದುದರಿಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜನರನ್ನು ಚದುರಿಸಿದರು. ಹಾಸನ ಮತ್ತು ಅರಸೀಕೆರೆಯಿಂದ ಬಂದ ಅಗ್ನಿಶಾಮಕ ದಳ ಸಿಬ್ಬಂದಿ, ಪೆಟ್ರೋಲ್‌ ಬಿದ್ದ ಸ್ಥಳಕ್ಕೆ ರಾಸಾಯನಿಕ ಸಿಂಪಡಿಸಿದರು.

ADVERTISEMENT

ಮಿನಿ ವ್ಯಾನ್‌ನಲ್ಲಿ ಚಾಲಕ ಒಬ್ಬನೇ ಇದ್ದ. ಇಬ್ಬರೂ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.