ADVERTISEMENT

ಹಾಸನಾಂಬಾ ದೇಗುಲ| ಅಂಗವಿಕಲರ ಅಧಿನಿಯಮದ ಆಯುಕ್ತ ರಾಜಣ್ಣರನ್ನು ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 4:23 IST
Last Updated 24 ಅಕ್ಟೋಬರ್ 2022, 4:23 IST
 ಭಾನುವಾರ ಹಾಸನಂಬ ದೇವಿ ದರ್ಶನಕ್ಕೆ ಬಂದಿದ್ದ ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ಎಸ್. ರಾಜಣ್ಣ
 ಭಾನುವಾರ ಹಾಸನಂಬ ದೇವಿ ದರ್ಶನಕ್ಕೆ ಬಂದಿದ್ದ ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ಎಸ್. ರಾಜಣ್ಣ   

ಹಾಸನ:ಭಾನುವಾರ ಹಾಸನಂಬ ದೇವಿ ದರ್ಶನಕ್ಕೆ ಬಂದಿದ್ದಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ಎಸ್. ರಾಜಣ್ಣ ಅವರ ವಾಹನವನ್ನೇ ದೇವಾಲಯದ ಆವರಣದವರೆಗೂ ಪೊಲೀಸರು ಬಿಡಲಿಲ್ಲ. ಅಂಗವಿಕಲರಾಗಿರುವ ರಾಜಣ್ಣ ಅವರು ನಡೆದು ಬರಬೇಕಾಯಿತು.

ಗಾಲಿ ಕುರ್ಚಿಯ ಸಹಾಯವಿಲ್ಲದೇ ಕುಟುಂಬದೊಂದಿಗೆ ದರ್ಶನ ಪಡೆದು ಬಂದ ಅವರು, ದೇವಾಲಯದ ಆವರಣದಿಂದ ತಮ್ಮ ವಾಹನದ ಮೂಲಕ ಹೋಗಲು ಸಹ ಬಿಡದೇ ಪೊಲೀಸರು ತಡೆದರು.

ಈ ಸಂದರ್ಭದಲ್ಲಿ ರಾಜಣ್ಣ ಅವರು ಪೊಲೀಸರ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದರು. ದೇವಾಲಯದ ಆವರಣದಲ್ಲಿ ಅಂಗವಿಕಲರ ನೆರವಿಗೆ ಕೇವಲ ಒಂದು ಗಾಲಿ ಕುರ್ಚಿಯನ್ನು ಒದಗಿಸಲಾಗಿದ್ದು. ಒಂದಕ್ಕಿಂತ ಹೆಚ್ಚು ಮಂದಿ ಅಂಗವಿಕಲರು ಬಂದರೆ ದರ್ಶನ ಪಡೆಯುವುದು ಹರಸಾಹಸವಾಗಿದೆ. ರಾಜಣ್ಣ ಅವರನ್ನು ಕಂಡ ಸ್ಥಳೀಯ ಅಧಿಕಾರಿಗಳು ಎಲ್ಲಿಂದಲೊ ಒಂದು ಗಾಲಿ ಕುರ್ಚಿ ಚೇರ್ ತಂದು ಅವರನ್ನು ಕಾರಿನ ಬಳಿ ತಂದು ಬಿಟ್ಟರು.

ADVERTISEMENT

ಅಂಗವಿಕಲರಿಗೆ, ವೃದ್ಧರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಜಿಲ್ಲಾಡಳಿತ, ಇದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.