ಹಾಸನ: ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ಧಾಪುರ ಗ್ರಾಮದ ತೋಟದಲ್ಲಿ ಬೆಳೆದಿದ್ದ ₹1.50 ಲಕ್ಷ ಮೌಲ್ಯದ ದಾಳಿಂಬೆ ಹಣ್ಣು ಕಳವು ಮಾಡಲಾಗಿದೆ.
ಜಾವಗಲ್ ಹೋಬಳಿಯ ಕರಗುಂದ ಗ್ರಾಮದ ಧರ್ಮಯ್ಯ ಅವರು, ಗಂಡಸಿ ಹೋಬಳಿ ಜೇನುಕಲ್ ಸಿದ್ದಾಪುರ ಗ್ರಾಮದ ನಾಲ್ಕು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದರು. ಕರುಗುಂದ ಗ್ರಾಮದಲ್ಲಿದ್ದ ಧರ್ಮಯ್ಯ ಪ್ರತಿದಿನ ಜಮೀನಿನ ಹೋಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಅವರದ್ದೇ ಊರಿನ ಜಯಣ್ಣ ಎಂಬುವವರನ್ನು ನೇಮಿಸಿದ್ದರು.
ಜಯಣ್ಣ ಅವರಿಗೆ ಒಂದೂವರೆ ತಿಂಗಳಿನಿಂದ ಹುಷಾರಿಲ್ಲದ್ದರಿಂದ ರಾತ್ರಿ ಸಮಯದಲ್ಲಿ ಜಮೀನಿನ ಹತ್ತಿರ ಹೋಗಿ ಮಲಗಲು ಸಾಧ್ಯವಾಗಿರಲಿಲ್ಲ. ಅ.4 ದಾಳಿಂಬೆ ಬೆಳೆದಿರುವ ಜಮೀನಿನ ಹತ್ತಿರ ಹೋಗಿ ನೋಡಿದಾಗ, ತೋಟಕ್ಕೆ ಹಾಕಿರುವ ತಂತಿ ಬೇಲಿಯ ನೆಟ್ ಅನ್ನು ಮೇಲಕ್ಕೆ ಎತ್ತಿ ಒಳನುಗ್ಗಿರುವ ಕಳ್ಳರು, 10 ಸಾಲುಗಳಲ್ಲಿ ಬೆಳೆದಿದ್ದ ಸುಮಾರು 1 ರಿಂದ ಒಂದೂವರೆ ಟನ್‌ನಷ್ಟು ದಾಳಿಂಬೆ ಹಣ್ಣುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.