ADVERTISEMENT

23ಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ

ಶೇ 30 ರಷ್ಟು ಶುಲ್ಕ ಕಡಿತ, ಬೇಡಿಕೆ ಈಡೇರದಿದ್ದರೆ ಶಾಲೆ ಬಂದ್‌: ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 14:53 IST
Last Updated 12 ಫೆಬ್ರುವರಿ 2021, 14:53 IST
ಬಿ.ಈ. ಶಿವರಾಮೇಗೌಡ
ಬಿ.ಈ. ಶಿವರಾಮೇಗೌಡ   

ಹಾಸನ: ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಶೇಕಡಾ 30 ರಷ್ಟು ಶುಲ್ಕ ಕಡಿತ ಮಾಡಿರುವುದನ್ನುವಿರೋಧಿಸಿ ಫೆ. 23 ರಂದು ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದಿಂದರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಈ. ಶಿವರಾಮೇಗೌಡಹೇಳಿದರು.

ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಶುಲ್ಕ ರಿಯಾಯಿತಿ ಮಾಡಲು ಶೇಕಡಾ 30 ರಷ್ಟು ಶಾಲಾ ಶುಲ್ಕಕಡಿತಗೊಳಿಸಿದೆ. ಇತರೆ ಶುಲ್ಕಗಳನ್ನು ತೆಗೆದುಕೊಳ್ಳಬಾರದೆಂಬ ಅವೈಜ್ಞಾನಿಕ ಕ್ರಮದಿಂದ ಶಾಲೆಗಳಲ್ಲಿಶೇಕಡಾ 55 ರಿಂದ 65 ರಷ್ಟು ಶುಲ್ಕ ಕಡಿತವಾದಂತಾಗಿದೆ. ಇದರಿಂದ ಶಿಕ್ಷಕರು ಹಾಗೂ ಸಿಬ್ಬಂದಿಯವೇತನದ ಮೇಲೆ ಪರಿಣಾಮ ಬೀರುವುದಲ್ಲದೆ, ಶಿಕ್ಷಣ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಗೆತಲುಪಲಿದೆ ಎಂದು ಶುಕ್ರವಾರ ಸುದ್ದುಗೋಷ್ಠಿಯಲ್ಲಿ ದೂರಿದರು.

ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಷರತ್ತುಗಳನ್ನು ಬಲವಂತವಾಗಿ ಹೇರಲಾಗಿದೆ. ಮಾನ್ಯತೆ ನವೀಕರಣಕ್ಕೆ ಹೊಸ ಶಾಲೆಯ ಠೇವಣಿ ಮೊತ್ತವನ್ನು ಹಳೇ ಶಾಲೆಗಳಿಗೆ ಕಡ್ಡಾಯಗೊಳಿಸುತ್ತಿರುವುದು ಸರಿಯಲ್ಲ. ಹಾಗಾಗಿ ತಕ್ಷಣ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗದಂತೆ ನವೀಕರಣ ಪ್ರಕ್ರಿಯೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ನಿರಂತರವಾಗಿ ನಡೆಸುತ್ತಿರುವದೌರ್ಜನ್ಯ ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಖಾಸಗಿ ಶಾಲೆಶಿಕ್ಷಕರು, ವ್ಯವಸ್ಥಾಪಕರು ಪ್ರತಿಭಟನೆ ನಡೆಸುವರು. ಆಗಲೂ ಮನವಿಗೆ ಸ್ಪಂದಿಸದಿದ್ದರೆಸಂಪೂರ್ಣವಾಗಿ ಶಾಲೆ ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶುಲ್ಕ ಕಡಿತನಷ್ಟವನ್ನು ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಿಂದಸರ್ಕಾರವೇ ಭರಿಸಲಿ. ಕೋವಿಡ್‌ ಸಂಕಷ್ಟದಲ್ಲಿರುವ ಶಾಲೆಗಳಿಗೆ ಹಾಗೂ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೊಸ ಶಾಲೆಯ ಷರತ್ತುಗಳಾದ ಅಗ್ನಿಶಾಮಕ ಇಲಾಖೆಯಿಂದ ಎನ್‌.ಒ.ಸಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಇಷ್ಟೊಂದು ಸಂಕಷ್ಟ ಅನುಭವಿಸುತ್ತಿದ್ದರೂ ಜಿಲ್ಲೆ ಪ್ರತಿನಿಧಿಸುವ ಶಿಕ್ಷಕರಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಮೌನವಾಗಿರುವುದು ಖಂಡನೀಯ. ಫೆ. 23ರ ಒಳಗೆಹೋರಾಟಕ್ಕೆ ಬೆಂಬಲ ಸೂಚಿಸದಿದ್ದರೆ ಅಥವಾ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲೆಗೆ ಬಾರದಂತೆಘೇರಾವ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಉಪಾಧ್ಯಕ್ಷೆ ತಾರಾ ಎಸ್. ಸ್ವಾಮಿ, ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.