ADVERTISEMENT

ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 8:53 IST
Last Updated 21 ಆಗಸ್ಟ್ 2020, 8:53 IST
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಖರೀದಿ ಜೋರಾಗಿತ್ತು.
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಖರೀದಿ ಜೋರಾಗಿತ್ತು.   

ಹಾಸನ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಕಟ್ಟಿನ ಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆಯಲ್ಲಿ ಖರೀದಿ ಜೋರಾಗಿತ್ತು. ಕಳೆದ ವರ್ಷದಷ್ಟು ಸಂಭ್ರಮ ಕಾಣಲಿಲ್ಲ.

ಶುಕ್ರವಾರ ಗೌರಿ ಹಬ್ಬ ಇರುವುದರಿಂದ ಹೂವು, ಹಣ್ಣು, ಬಳೆ, ಬಾಗಿನ ಖರೀದಿ ಬಿರುಸಾಗಿತ್ತು. ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿಗೆ ₹ 100 ರಿಂದ ₹ 120 ವರೆಗೆ, ಬಾಳೆಹಣ್ಣು ಒಂದು ಡಜನ್‌ ₹50 ನಿಂದ ₹60, ಮಾವಿನ ಸೊಪ್ಪು ಒಂದು ಕಟ್ಟು ₹10, ಬಾಳೆಕಂಬ ಜೋಡಿಗೆ ₹ 50 ರಿಂದ 100ರಂತೆ ಮಾರಾಟವಾಗುತ್ತಿತ್ತು.

ಸೌತೆಕಾಯಿಬೇಡಿಕೆ ಹೆಚ್ಚಿತ್ತು. ₹ 100ಕ್ಕೆ 4 ಸೌತೆಕಾಯಿ ಮಾರಾಟ ಮಾಡಲಾಗುತ್ತಿತ್ತು. ಸೀರೆ, ಬಳೆ, ಬಾಗಿನ ಮತ್ತು ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.