ಪ್ರಾತಿನಿಧಿಕ ಚಿತ್ರ
ಬಾಗೂರು (ಹಾಸನ ಜಿಲ್ಲೆ): ಹೋಬಳಿಯ ಎಂ.ಶಿವರ ಗ್ರಾಮ ಪಂಚಾಯ್ತಿ ಸದಸ್ಯ ರಾಮು ಅವರ ಮನೆಯಲ್ಲಿ ಇತ್ತೀಚೆಗೆ ಅದೇ ಪಂಚಾಯ್ತಿ ಪಿಡಿಒ ರಾಮಸ್ವಾಮಿ ಹಾಗೂ ಹಿರೀಸಾವೆ ಪಿಡಿಒ ಸತೀಶ್ ಪರಸ್ಪರ ಹೊಡೆದಾಡಿಕೊಂಡಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ.
ಗಣೇಶ ಹಬ್ಬದ ಮಾರನೇ ದಿನ ಈ ಘಟನೆ ನಡೆದಿದೆ. ರಾಮಸ್ವಾಮಿ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಮುಖ ಹಾಗೂ ತಲೆಗೆ ಗಾಜುಗಳು ಚುಚ್ಚಿ ಗಾಯಗೊಂಡ ಸತೀಶ್ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಸರ್ಕಾರಿ ನೌಕರರ ಸಂಘದ ಚುನಾವಣೆ ವೇಳೆ ಇಬ್ಬರ ನಡುವೆ ವೈಮನಸ್ಯವಾಗಿತ್ತು. ಇಬ್ಬರೂ ರಾಮು ಅವರ ಮನೆಗೆ ಬಂದಾಗ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.