ADVERTISEMENT

ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ

ಹವಾಮಾನ ವೈಪರೀತ್ಯ: ಚಳಿಗೆ ನಡುಗಿದ ಜನತೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:17 IST
Last Updated 12 ಮೇ 2022, 15:17 IST
ಹಾಸನದಲ್ಲಿ ಗುರುವಾರ ಜಿಟಿಜಿಟಿ ಮಳೆ ಸುರಿಯಿತು
ಹಾಸನದಲ್ಲಿ ಗುರುವಾರ ಜಿಟಿಜಿಟಿ ಮಳೆ ಸುರಿಯಿತು   

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ದಿನವಿಡೀ ಜಿಟಿಜಿಟಿಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಬುಧವಾರ ರಾತ್ರಿ ಹಾಗೂ ಗುರುವಾರ ನಸುಕಿನಿಂದ ಸುರಿದ ಮಳೆಗೆ ಸಾರ್ವಜನಿಕರು ಪರದಾಡಿದರು. ಕೆಲಸಕ್ಕೆ ತೆರಳುವವರಿಗೆ, ಕೂಲಿ ಕಾರ್ಮಿಕರಿಗೆ
ಸಮಸ್ಯೆ ಆಯಿತು. ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ಮನೆಯಿಂದ ಹೊರ ಬರಲು ಕೊಡೆ ಅನಿವಾರ್ಯವಾಗಿದೆ. ಬೆಳಿಗ್ಗೆ ಬಿರುಸಾಗಿ ಸುರಿದಪರಿಣಾಮ ಹಾಲು, ಪತ್ರಿಕೆ, ದಿನಸಿ ಖರೀದಿಸಲು ಸಾಕಷ್ಟು ಸಮಸ್ಯೆ ಆಯಿತು. ಸಂಜೆ ವರೆಗೂ ಬಿಟ್ಟು ಬಿಟ್ಟು ಸುರಿಯಿತು. ಜಿಲ್ಲೆಯಲ್ಲಿತುಂತುರು ಮಳೆ ಜತಗೆಗೆ ಚಳಿ ನಡುಗುವಂತೆ ಮಾಡಿದೆ. ಅಲ್ಲಲ್ಲಿ ವಿದ್ಯುತ್ ಸರಬರಾಜುಕೂಡ ಸ್ಥಗಿತವಾಗಿದ್ದು, ಜನರು ಪರದಾಡಿದರು.

ಹವಾಮಾನ ಇಲಾಖೆ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಣೆ ಮಾಡಿದೆ.ಮಳೆಯಿಂದಾಗಿ ಬೆಳೆದು ನಿಂತ ಬೆಳೆಗೆ ಹಾನಿಯಾಗಿದೆ. ಹಾಸನ, ಆಲೂರು,
ಅರಕಲಗೂಡು, ಚನ್ನರಾಯಪಟ್ಟಣ, ಕೊಣನೂರು, ಹಿರೀಸಾವೆ, ಸಕಲೇಶಪುರ, ಬೇಲೂರು, ಶ್ರವಣಬೆಳಗೊಳ ಭಾಗದಲ್ಲಿ ತುಂತುರು ಮಳೆಯಾಗಿದೆ.

ಹವಾಮಾನ ವೈಪರೀತ್ಯದಿಂದ ಮಕ್ಕಳಲ್ಲಿ ಜ್ವರದ ಪ್ರಕರಣ ಹೆಚ್ಚುತ್ತಿದೆ. ಹಿರಿಯರಿಗೂನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಕೆಲವರು ಆಸ್ಪತ್ರೆ ಬದಲು ಬಿಸಿ ನೀರುಸೇವನೆಯಂತಹ ಮನೆ ಮದ್ದಿಗೆ ಮೊರೆ ಹೋಗಿದ್ದಾರೆ.

‘ಹವಾಮಾನ ಬದಲಾವಣೆಯಾಗಿ ನಿರಂತರ ಮಳೆ ಸುರಿದ ವೇಳೆ ಕೆಮ್ಮು, ಜ್ವರ, ಶೀತಸಾಮಾನ್ಯ. ಬೆಚ್ಚನೆಯ ಉಡುಪು, ಕಿವಿ ಮುಚ್ಚಿಕೊಳ್ಳುವಂತಹ ಟೋಪಿಹಾಕಬೇಕು. ಬಿಸಿ ನೀರುಸೇವನೆ ಒಳ್ಳೆಯದು.ಹೊರಗೆ ತಿನಿಸು ತಿನ್ನುವುದನ್ನುತಪ್ಪಿಸಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್
ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.