ADVERTISEMENT

ದೇವತಾರಾಧನೆ ಪರಂಪರೆ ಮುಂದುವರಿಯಲಿ: ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:48 IST
Last Updated 11 ನವೆಂಬರ್ 2025, 1:48 IST
ಅರಸೀಕೆರೆ ಕಣಕಟ್ಟೆ ಹೋಬಳಿಯ ಶ್ಯಾನೆಗೆರೆಯ ಗರುಡನಗಿರಿ ಗ್ರಾಮದ ಆಂಜನೇಯ ಸ್ವಾಮಿಯ ಅಷ್ಟಬಂಧ ಜೀರ್ಣೋದ್ಧಾರ ಶಿಖರ ಕಳಶಾರೋಹಣ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ಗ್ರಾಮಸ್ಥರು ಗೌರವಿಸಿದರು 
ಅರಸೀಕೆರೆ ಕಣಕಟ್ಟೆ ಹೋಬಳಿಯ ಶ್ಯಾನೆಗೆರೆಯ ಗರುಡನಗಿರಿ ಗ್ರಾಮದ ಆಂಜನೇಯ ಸ್ವಾಮಿಯ ಅಷ್ಟಬಂಧ ಜೀರ್ಣೋದ್ಧಾರ ಶಿಖರ ಕಳಶಾರೋಹಣ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ಗ್ರಾಮಸ್ಥರು ಗೌರವಿಸಿದರು    

ಅರಸೀಕೆರೆ: ‘ದೇವಾಲಯಗಳು ಮನುಷ್ಯ ಹಾಗೂ ಆ ಗ್ರಾಮದ ಇತಿಹಾಸದ ಪ್ರತೀಕವಾದ ದೇವಾಲಯಗಳಲ್ಲಿ ಪೂರ್ವಜರು ಆರಂಭಿಸಿರುವ ದೇವತಾರಾಧನೆ ಪರಂಪರೆ ಮುಂದುವರಿಯಬೇಕು’ ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಶ್ಯಾನೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡನಗಿರಿ ಗ್ರಾಮದ ಆಂಜನೇಯ ಸ್ವಾಮಿಯ ಅಷ್ಟಬಂಧ ಜೀರ್ಣೋದ್ಧಾರ, ಶಿಖರ ಕಳಶಾರೋಹಣ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನಗಳು ಅಭಿವೃದ್ಧಿಯಾಗುವುದರಿಂದ ಗ್ರಾಮಸ್ಥರು ಒಂದೆಡೆ ಸೇರಿ ಜಾತ್ರೆಗಳು ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನೂಕೂಲವಾಗುತ್ತದೆ ಎಂದರು.

ADVERTISEMENT

ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೋವಿಕಾಲೊನಿ, ಕರಡಿಹಳ್ಳಿ, ಕಲ್ಲುಸಾದರಹಳ್ಳಿ, ಕಲ್ಗುಂಡಿ, ಗೋಪಾಲಪುರ, ಕುಂದೂರು, ರಂಗನಾಯ್ಕನಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಶ್ಯಾನೆಗೆರೆ ಪಂಚಾಯಿತಿ ವ್ಯಾಪ್ತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.