ADVERTISEMENT

ಬೇಲೂರು | ಕಂದಾಯ ಬಾಕಿ, ಅಂಗಡಿಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 14:17 IST
Last Updated 7 ಏಪ್ರಿಲ್ 2025, 14:17 IST
ಬೇಲೂರಿನಲ್ಲಿ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ನೇತೃತ್ವದಲ್ಲಿ ಕಂದಾಯ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಳಿಗೆಗಳಿಗೆ ಬೀಗ ಹಾಕಲಾಯಿತು
ಬೇಲೂರಿನಲ್ಲಿ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ನೇತೃತ್ವದಲ್ಲಿ ಕಂದಾಯ ಬಾಕಿ ಉಳಿಸಿಕೊಂಡಿರುವ ಅಂಗಡಿ ಮಳಿಗೆಗಳಿಗೆ ಬೀಗ ಹಾಕಲಾಯಿತು   

ಬೇಲೂರು: ಕಂದಾಯ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಅಂಗಡಿ, ಮಳಿಗೆಗಳಿಗೆ ಬೀಗ ಹಾಕಲಾಯಿತು.

ನೇತೃತ್ವ ವಹಿಸಿದ್ದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ‘ಪುರಸಭೆಗೆ ಅಂದಾಜು ₹2 ಕೋಟಿಗಳಷ್ಟು ಕಂದಾಯ ಬರಬೇಕಿದ್ದು, ಕಂದಾಯ ಉಳಿಸಿಕೊಂಡಿರುವವರ ಹಾಗೂ ಲೈಸೆನ್ಸ್‌ ಪಡೆಯದೇ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಪಟ್ಟಣದ ಅಭಿವೃದ್ಧಿಗೆ ಕಂದಾಯ ಅತಿ ಮುಖ್ಯವಾಗಿದ್ದು, ಸಾರ್ವಜನಿಕರು ತಪ್ಪದೇ ಕಂದಾಯ ಪಾವತಿಸಿ ಪಟ್ಟಣದ ಅಭಿವೃದ್ದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪುರಸಭೆ ಆರೋಗ್ಯಾಧಿಕಾರಿ ಲೊಹಿತ್, ಕಂದಾಯ ನಿರೀಕ್ಷಕ ಪ್ರಸನ್ನ, ಕರ ವಸೂಲಿಗಾರರಾದ ಮೊಹನೇಶ್, ಸಲ್ಮನ್, ಜಯರಾಂ, ಕಾಂಗ್ರೆಸ್ ಮುಖಂಡರಾದ ತೌಫಿಕ್, ಸತೀಶ್ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.