ADVERTISEMENT

ಕಂದಾಯ ದಾಖಲೆ ಮನೆ ಬಾಗಿಲಿಗೆ, ತೇಜೂರು ಗ್ರಾಮದಲ್ಲಿ ಚಾಲನೆ, ಎರಡು ದಿನ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 15:33 IST
Last Updated 11 ಮಾರ್ಚ್ 2022, 15:33 IST
ಆರ್.ಗಿರೀಶ್
ಆರ್.ಗಿರೀಶ್   

ಹಾಸನ: ಕಂದಾಯ ಇಲಾಖೆ ವತಿಯಿಂದ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಅಭಿಯಾನವನ್ನು ಮಾರ್ಚ್‌ 12 ಮತ್ತು 13 ರಂದು ಹಮ್ಮಿಕೊಳ್ಳಲಾಗಿದೆ’ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

‘ಮಾರ್ಚ್ 12ರಂದು ಬೆಳಿಗ್ಗೆ 10ಕ್ಕೆ ತಾಲ್ಲೂಕಿನ ತೇಜೂರಿನಲ್ಲಿಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಆಯಾ ತಾಲ್ಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಚಾಲನೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 2,600 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಏಕಕಾಲಕ್ಕೆ ದಾಖಲೆ ತಲುಪಿಸಲಾಗುವುದು. 2.21 ಲಕ್ಷ ಕುಟುಂಬಗಳಿಗೆ ಆರ್‌ಟಿಸಿ ದಾಖಲೆ ನೀಡುವ ಗುರಿ ಹೊಂದಲಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಡಿತರ ಚೀಟಿ ಹೊಂದಿರುವವರು ಹಾಗೂ ಫ್ರೂಟ್ಸ್‌ ತಂತ್ರಾಂಶದಲ್ಲಿ ಮಾಹಿತಿದಾಖಲಾಗಿರುವವರಿಗೆ ತಲುಪಿಸಲಾಗುವುದು. ಈ ಅಭಿಯಾನದಲ್ಲಿ ದಾಖಲೆ ತಲುಪಿಸಲು ಸಾಧ್ಯವಾಗದಿದ್ದರೆ ಮಾರ್ಚ್ 21ರಿಂದ ಮಾರ್ಚ್ 26ರ ವರೆಗೆ ನಾಡಕಚೇರಿಯಲ್ಲಿ ಉಚಿತವಾಗಿ ದಾಖಲೆಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಕಂದಾಯ ಸಿಬ್ಬಂದಿಯಾದ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್, ತಹಶೀಲ್ದಾರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ಕಂದಾಯ ದಾಖಲೆಗಳನ್ನು ತಲುಪಿಸುವರು’ ಎಂದರು.

ಖಾತೆದಾರರ ಹೆಸರಿನಲ್ಲಿ ಹಲವಾರು ಪಹಣಿಇರುವ ಸಾಧ್ಯತೆ ಇದೆ. ಆ ಗ್ರಾಮದ ಜತೆಗೆ ಬೇರೆ ಗ್ರಾಮದವರ ಆರ್‌ಟಿಸಿ ಸಹ ಇರುತ್ತದೆ. ಉದಾಹರಣೆಗೆ ಚನ್ನರಾಯಪಟ್ಟಣದಲ್ಲಿ ಒಬ್ಬರೇ ವ್ಯಕ್ತಿ ಹೆಸರಿನಲ್ಲಿ 7, 8, 10 ರ ವರೆಗೂಪಹಣಿಇದೆ. ಅವುಗಳನ್ನು ಗುಂಪು ಮಾಡಿ, ಆಯಾ ವ್ಯಕ್ತಿಗೆ ತಲುಪಿಸಲಾಗುವುದು ಎಂದರು.

‘ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಗೆ 1.12 ಕಿ.ಮೀ. ಸುರಂಗ ನಿರ್ಮಿಸಲಾಗುತ್ತಿದೆ. ಈಗಾಗಲೇ ಒಂದು ಕಡೆ 700 ಮೀಟರ್‌ ಹಾಗೂ ಮತ್ತೊಂದು ಕಡೆಯಿಂದ 150 ಮೀಟರ್‌ ನಿರ್ಮಿಸಲಾಗಿದೆ. ಆದರೆ ಮಧ್ಯ ಭಾಗದಲ್ಲಿಮಣ್ಣು ಸಡಿಲಗೊಂಡು ಸುರಂಗ ಕುಸಿಯುತ್ತಿದೆ’ ಎಂದರು.

ಸೂರತ್‌ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ವರದಿ ಪಡೆದಿದ್ದು, ಆಜಾಗದಲ್ಲಿ ಸುರಂಗ ನಿರ್ಮಿಸುತ್ತಿಲ್ಲ. ಅದರ ಬದಲು ಕಾಂಕ್ರೀಟ್‌ ಕವರ್ ಮಾಡಿನಂತರ ಮಣ್ಣು ಸುರಿಯಲಾಗುತ್ತದೆ. ಅಪಾಯದಲ್ಲಿರುವ ಎರಡು ಮನೆಗಳಿಗೆ ಪರಿಹಾರ ನೀಡಿ ಸ್ಥಳಾಂತರ ಮಾಡಲಾಗಿದೆ. ಸುರಕ್ಷತೆಗೆ ಆದ್ಯತೆ ನೀಡಿ ಕೆಲಸಮಾಡುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.