
ಸಂಕ್ಲಾಪುರ ಮಠದ ಕಿರಿಯ ಮಂಜುನಾಥ ಸ್ವಾಮೀಜಿ ಅವರನ್ನು ಹಾಸನದ ತಣ್ಣೀರುಹಳ್ಳ ಮಠದಲ್ಲಿ ಸನ್ಮಾನಿಸಲಾಯಿತು
ಹಾಸನ: ಸಂಕ್ಲಾಪುರ ಮಠ ಕಿರಿಯ ಮಠಾಧೀಶರಾಗಿ ನೇಮಕವಾಗಿರುವ ತಣ್ಣೀರು ಹಳ್ಳ ಮಠದ ಮಂಜುನಾಥ್ ಸ್ವಾಮೀಜಿ ಅವರನ್ನು ಭಾನುವಾರ ಬೀಳ್ಕೊಡಲಾಯಿತು.
ಬೆಟ್ಟದಪುರದ ಕನ್ನಡ ಮಠದ ಮಠಾಧೀಶ ಚನ್ನಬಸವೇಶ್ವರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಹಿರಿಯ ಸೇವೆಯನ್ನು ಮಾಡುವುದರ ಜೊತೆಗೆ ಭಕ್ತರ, ಸಾರ್ವಜನಿಕರ ಸೇವಾಕಾರ್ಯ ಮಾಡುವ ಜವಾಬ್ದಾರಿ ಸಿಕ್ಕಿದೆ. ಅ ಕಾರ್ಯವನ್ನು ಸಂಕ್ಲಾಪುರ ಮಠದ ಕಿರಿಯ ಮಠಾಧೀಶ ಮಂಜುನಾಥ್ ಸ್ವಾಮೀಜಿ ಯಶಸ್ವಿಯಾಗಿ ನಿರ್ವಹಿಸಲು ಭಕ್ತರ ಸಹಕಾರ ಅಗತ್ಯ ಎಂದರು.
ಏಳು ವರ್ಷದಿಂದ ವಿಜಯಕುಮಾರ್ ಸ್ವಾಮೀಜಿ ಜೊತೆ ಪೂಜೆ ಕಾರ್ಯಗಳನ್ನು ಮಾಡಿಕೊಂಡಿದ್ದ ಇವರು ಸಂಕ್ಲಾಪುರ ಮಠಕ್ಕೆ ಕಿರಿಯ ಮಠಾಧೀಶರಾಗಿರುವುದು ಸಂತೋಷ ತಂದಿದೆ ಎಂದರು.
ತಣ್ಣೀರುಹಳ್ಳ ಮಠದ ವಿಜಯಕುಮಾರ್ ಸ್ವಾಮೀಜಿ ಮಾತನಾಡಿ, ತಣ್ಣೀರುಹಳ್ಳ ಮಠದಲ್ಲಿ ಮಂಜುನಾಥ್ ಅವರ ಸೇವಾಕಾರ್ಯ ಮೆಚ್ಚುವಂಥದ್ದು. ಸಂಕ್ಲಾಪುರ ಮಠದ ಧರ್ಮ ರಾಜೇಂದ್ರ ಸ್ವಾಮೀಜಿ ಹಾಗೂ ಮಠದ ಭಕ್ತರ ಅಪೇಕ್ಷದಂತೆ ಮಂಜುನಾಥ್ ಕಿರಿಯ ಸ್ವಾಮೀಜಿ ಆಗಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ನ.17 ಮತ್ತು 18ರಂದು ನೂತನ ಕಿರಿಯ ಸ್ವಾಮೀಜಿ ಸೇವಾದೀಕ್ಷಾ ಕಾರ್ಯಕ್ರಮ ನಡೆಯಲಿದ್ದು, ಸಂಕ್ಲಾಪುರ ಮಠದ ಭಕ್ತರು, ಸುತ್ತಲಿನ ಗ್ರಾಮಗಳ ಮುಖಂಡರು, ಮಠದ ಆಡಳಿತ ಮಂಡಳಿಯವರು ಕಿರಿಯ ಸ್ವಾಮೀಜಿ ಅವರನ್ನು ಆಹ್ವಾನಿಸಿದರು.
ತಣ್ಣೀರು ಹಳ್ಳ ಮಠದ ಕಾರ್ಯದರ್ಶಿ ಕಾಂತರಾಜ್, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ವೀರಶೈವ ಲಿಂಗಾಯತ ಮಹಾಸಭಾದ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಈಶ್ವರಹಳ್ಳಿ ಶಿವಣ್ಣ, ಮಡಬಲು ಕಾಂತರಾಜ್, ಚಿಕ್ಕೋಟೆ ಮಹೇಶ್, ಈಶ್ವರಹಳ್ಳಿ ನಿರಂಜನ್, ಸಂಕ್ಲಾಪುರ ಮಠದ ಆಡಳಿತ ಸಮಿತಿಯರು, ಭಕ್ತರು, ತಣ್ಣೀರುಹಳ್ಳ ಮಠದ ವ್ಯವಸ್ಥಾಪಕ ಶಂಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.