ಬೇಲೂರು: ಸತ್ಯಸಾಯಿ ಬಾಬಾ ಅವರ 14ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಸತ್ಯಸಾಯಿ ಟ್ರಸ್ಟ್ ಸಂಸ್ಥೆಯಿಂದ ಇಲ್ಲಿನ ಜೆಪಿ ನಗರದಲ್ಲಿ ಸೋಮವಾರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಇಂದ್ರೇಶ್ ಮಾತನಾಡಿ, ‘ಸತ್ಯಸಾಯಿ ಬಾಬಾ ಅವರು ಸಾರ್ವಜನಿಕರ ಸೇವೆ ಮಾಡುವುದಕ್ಕಾಗಿ ಹಲವು ಸೇವಾ ಕಾರ್ಯಗಳನ್ನು ರೂಪಿಸಿಕೊಟ್ಟಿದ್ದು, ಉಚಿತ ಶಿಕ್ಷಣ, ಆಸ್ಪತ್ರೆಗಳನ್ನು ಕಟ್ಟಿಸಿ ಬಡ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಅವರ ಆರಾಧನಾ ಮಹೋತ್ಸವದ ಅಂಗವಾಗಿ ಸುಮಾರು 1500 ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಾಳೆಹಣ್ಣು ರಮೇಶ್ ಮಾತನಾಡಿ, ‘ಸಾಯಿ ಬಾಬಾ ಅವರು ದೇಶ ವಿದೇಶಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು. ಅವರು ದೇಹತ್ಯಾಗ ಮಾಡಿ 14 ವರ್ಷ ಕಳೆದಿದ್ದರೂ, ಅವರು ನಡೆಸಿಕೊಂಡು ಬರುತಿದ್ದ ಸೇವಾ ಕಾರ್ಯಗಳು ಮುಂದುವರಿದುಕೊಂಡು ಬರುತ್ತಿದೆ’ ಎಂದರು.
ಟ್ರಸ್ಟ್ ಸಂಚಾಲಕ ರಾಜೇಗೌಡ, ಪದಾಧಿಕಾರಿಗಳಾದ ಗಿಡ್ಡೇಗೌಡ, ಕಲಾವತಿ, ಲಕ್ಷ್ಮಿ, ಪ್ರಭಾವತಿ, ದೇವೇಗೌಡ, ಚೇತನ್, ಪುನೀತ್, ನಾಗರಾಜು, ನಾಗಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.