ಹಳೇಬೀಡು: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕ, ಬಾಲಕಿಯರ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಬಾಲಕರ ವಿಭಾಗದಲ್ಲಿ ವಿನಯ್.ಟಿ.ವಿ, ಜೀವನ್ ಎಚ್.ಡಿ, ದರ್ಶನ್ ಎನ್.ಎಂ, ಬಾಲಕಿಯರಲ್ಲಿ ಬಾಂಧವ್ಯ ಸಿ.ಎಸ್, ವಾಣಿಶ್ರೀ, ಲೇಖನ
ಜಿಲ್ಲಾ ಮಟ್ಟದ ಕೊಕ್ಕೊ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬಾಲಕಿಯರು ರಿಲೇಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಬಾಲಕರ ತಂಡದಲ್ಲಿ ನಂದನ್ ಎಚ್.ಎಸ್ ಹ್ಯಾಮರ್ ಥ್ರೋ ಪ್ರಥಮ, ಬಾಲಕರ ತಂಡ ರಿಲೇಯಲ್ಲಿ ಪ್ರಥಮ ಬಹುಮಾನ ಪಡೆದಿದೆ.
ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಸಿ.ಮಹೇಶ್ ಹಾಗೂ ಜಿ.ಆರ್.ವಸಂತ ಕುಮಾರಿ, ತಂಡದ ಮೇಲ್ವೀಚಾರಕರಾದ ಪ್ರಸನ್ನ ಕುಮಾರ್, ಸುರೇಶ್ ನಾಯ್ಕ, ಚಂದ್ರಶೇಖರ್ ಎನ್. ಲಕ್ಷ್ಮಿ ಹಾಗೂ ಪ್ರೋತ್ಸಾಹಿಸಿದ ಶಿಕ್ಷಕರನ್ನು ಎಸ್.ಡಿ.ಎಂಸಿ ಅಧ್ಯಕ್ಷ, ಬಿ.ಎಸ್.ಸೋಮಶೇಖರ್, ಪ್ರಭಾರ ಉಪಪ್ರಾಂಶುಪಾಲ ಮೋಹನ್ ರಾಜು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.