ADVERTISEMENT

ಹಾಲು ಉತ್ಪಾದಕರಿಗೆ ಎಸ್‌ಎಂಎಸ್‌ ಮೂಲಕ ಸಂದೇಶ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 14:04 IST
Last Updated 1 ಆಗಸ್ಟ್ 2023, 14:04 IST
ಗಂಡಸಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಎಸ್‌ಎಂಎಸ್‌ ಸಂದೇಶ ಕಳುಹಿಸುವ ಸೇವೆಯನ್ನು ಅಧ್ಯಕ್ಷ ಮಲ್ಲಿಕಾರ್ಜುನ ಉದ್ಘಾಟಿಸಿದರು.
ಗಂಡಸಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಎಸ್‌ಎಂಎಸ್‌ ಸಂದೇಶ ಕಳುಹಿಸುವ ಸೇವೆಯನ್ನು ಅಧ್ಯಕ್ಷ ಮಲ್ಲಿಕಾರ್ಜುನ ಉದ್ಘಾಟಿಸಿದರು.   

ಗಂಡಸಿ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾಗದರಹಿತ ವಹಿವಾಟು ನಡೆಸಲು ಮುಂದಾಗಿರುವ ಹಾಲು ಒಕ್ಕೂಟ, ಇದೀಗ ಹಾಲು ಉತ್ಪಾದಕರಿಗೆ ಎಸ್‌ಎಂಎಸ್‌ ಸಂದೇಶ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸಿದೆ.

ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಹಾಸನ ಹಾಲು ಒಕ್ಕೂಟದಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಸ್‌ಎಂಎಸ್‌ ಸಂದೇಶ ರವಾನಿಸುವ ಸೇವೆಗೆ ಇಲ್ಲಿನ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯನಿರ್ವಹಣಾಧಿಕಾರಿ ಬೀರಲಿಂಗಪ್ಪ, ಕಾಗದರಹಿತ ವಹಿವಾಟು ನಡೆಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದೆ. ನಿತ್ಯ ಸಂಘಕ್ಕೆ ಹಾಲು ಹಾಕುವ ಹಾಲು ಉತ್ಪಾದಕ ರೈತರಿಗೆ, ಹಾಲು ಹಾಕಿದ ಒಂದೇ ನಿಮಿಷದಲ್ಲಿ ಹಾಲಿನ ತೂಕ, ದರ, ಕೊಬ್ಬಿನ ಅಂಶ ಸೇರಿದಂತೆ ಎಲ್ಲ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕ ರೈತರಿಗೆ ರವಾನಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ವಾರಕ್ಕೆ ಒಂದು ಬಾರಿ, ಸಂಗ್ರಹವಾದ ಹಾಲಿನ ಮೊತ್ತದ ವಿವರವನ್ನು ಎಸ್‌ಎಂಎಸ್‌ ಮೂಲಕ ಉತ್ಪಾದಕರಿಗೆ ಕಳುಹಿಸಲಾಗುವುದು ಎಂದರು.

ಸಂಘದ ಸದಸ್ಯರಾದ ಜಯಮ್ಮ, ನಂಜಪ್ಪ, ಶಂಕರಯ್ಯ, ಮಹೇಶ್, ಮಹಮ್ಮದ್‌ ಆಸೀಫ್‌, ನಂಜಪ್ಪ ಜಿ.ಎನ್‌., ಪರಮೇಶ್‌, ಶಿವಣ್ಣ, ಲಿಂಗರಾಜು, ಮಂಜಣ್ಣ, ಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.