ADVERTISEMENT

ದೇಗುಲದಲ್ಲಿ ವಿಶೇಷ ಪೂಜೆ; ದರ್ಗಾದಲ್ಲಿ ಪ್ರಾರ್ಥನೆ

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 18 ಮೇ 2022, 15:37 IST
Last Updated 18 ಮೇ 2022, 15:37 IST
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜನ್ಮದಿನದ ಅಂಗವಾಗಿ ನೀರು ಬಾಗಿಲು ಆಂಜನೇಯ ದೇವಸ್ಥಾನದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಎಸ್.ದ್ಯಾವೇಗೌಡ, ರಘು ಹೊಂಗೆರೆ, ಕಾರ್ಲೆ ಇಂದ್ರೇಶ್‌ ಇದ್ದಾರೆ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜನ್ಮದಿನದ ಅಂಗವಾಗಿ ನೀರು ಬಾಗಿಲು ಆಂಜನೇಯ ದೇವಸ್ಥಾನದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಎಸ್.ದ್ಯಾವೇಗೌಡ, ರಘು ಹೊಂಗೆರೆ, ಕಾರ್ಲೆ ಇಂದ್ರೇಶ್‌ ಇದ್ದಾರೆ   

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 90ನೇ ವರ್ಷದ ಜನ್ಮದಿನದಅಂಗವಾಗಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ನಗರದವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನೀರುಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವೇಗೌಡರ ಆಯುಸ್ಸು‌, ಆರೋಗ್ಯವೃದ್ಧಿಗಾಗಿ ಅರ್ಚನೆಮಾಡಿಸಿ, ಸಿಹಿ ಹಂಚಿ, ಈಡುಗಾಯಿ ಒಡೆದು ಪ್ರಾರ್ಥಿಸಲಾಯಿತು.ನಂತರ ಆಜಾದ್ ರಸ್ತೆಯಲ್ಲಿರುವ ದರ್ಗಾದಲ್ಲೂ ಪ್ರಾರ್ಥನೆ ಸಲ್ಲಿಸಿದರು.

ಹಿರಿಯಮುಖಂಡ ಕೆ.ಎಂ.ರಾಜೇಗೌಡ, ಯುವ ಮುಖಂಡ ಹಾಗೂ ಸ್ವರೂಪ್ ಎಚ್.ಪಿ.,ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಎಚ್‍ಡಿಸಿಸಿ ಬ್ಯಾಂಕ್ನಿರ್ದೇಶಕರಾದ ಜಯರಾಂ, ಕಾರ್ಲೆ ಇಂದ್ರೇಶ್, ನಗರಸಭೆ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್, ಸದಸ್ಯರಾದ ವಾಸುದೇವ್, ಸಿ.ಆರ್.ಶಂಕರ್, ಚಂದ್ರೇಗೌಡ, ಜಿಲ್ಲಾಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು ಹಾಜರಿದ್ದರು.

ADVERTISEMENT

‘ಅಲ್ಪಕಾಲವಷ್ಟೇ ಅಧಿಕಾರದಲ್ಲಿದ್ದರೂ ಕರ್ನಾಟಕ ಮತ್ತು ಭಾರತಕ್ಕೆ ಅವಿಸ್ಮರಣೀಯಕೊಡುಗೆ ನೀಡಿದ್ದಾರೆ. ಕಾಯಾ ವಾಚಾ, ಮನಸಾ ಜನರ ಉದ್ಧಾರಕ್ಕಾಗಿ ಶ್ರಮಿಸಿದದೇವೇಗೌಡರು ಭಾರತದ ರಾಜಕೀಯ ಕರ್ಮಯೋಗಿ. 90ರ ಹರೆಯದಲ್ಲೂಜನರಪರ ಹೋರಾಟ ನಡೆಸುತ್ತಿರುವ ಧಣಿವರಿಯದ ಕಾಯಕಯೋಗಿ’ ಎಂದುಎಚ್.ಡಿ.ಕುಮಾರಸ್ವಾಮಿ ಗುಣಗಾನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.