ADVERTISEMENT

ಆ‍ರೋಗ್ಯಕ್ಕೆ ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ಗಿರೀಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:55 IST
Last Updated 6 ಡಿಸೆಂಬರ್ 2021, 4:55 IST
ಹಾಸನದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಗುಂಡು ಎಸೆದು ಚಾಲನೆ ನೀಡಿದರು. ಎಸ್ಪಿ ಆರ್‌. ಶ್ರೀನಿವಾಸ್‌ಗೌಡ, ಎಎಸ್ಪಿ ಬಿ.ಎನ್‌. ನಂದಿನಿ, ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ವೈ.ಎಂ. ಪ್ರಜ್ವಲ್ ಗೌಡ ಇದ್ದರು
ಹಾಸನದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಗುಂಡು ಎಸೆದು ಚಾಲನೆ ನೀಡಿದರು. ಎಸ್ಪಿ ಆರ್‌. ಶ್ರೀನಿವಾಸ್‌ಗೌಡ, ಎಎಸ್ಪಿ ಬಿ.ಎನ್‌. ನಂದಿನಿ, ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ವೈ.ಎಂ. ಪ್ರಜ್ವಲ್ ಗೌಡ ಇದ್ದರು   

ಹಾಸನ: ‘ಉತ್ತಮ ಆರೋಗ್ಯ ಪಡೆದು ಸದೃಢರಾಗಲು ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸಲಹೆ ನೀಡಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕ್ರೀಡೆ ಶಿಸ್ತನ್ನು ರೂಢಿಸಿಕೊಳ್ಳಲು ಸಹಕಾರಿ. ಅಲ್ಲದೆ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ. ಪೊಲೀಸ್ ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ನಿತ್ಯ ಕಾರ್ಯ ನಿರ್ವಹಿಸಬೇಕು. ಒತ್ತಡದ ನಿವಾರಣೆಗೆ ಮತ್ತು ಮನಸ್ಸಿನ ಶುದ್ಧಿಕರಣಕ್ಕೆ ಕ್ರೀಡೆ ಸಹಕಾರಿ’ ಎಂದರು.

ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ವೈ.ಎಂ. ಪ್ರಜ್ವಲ್ ಗೌಡ, ‘ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗುವುದ ರಿಂದ ದೈಹಿಕ ಶಕ್ತಿಯಲ್ಲದೇ ಮಾನಸಿಕವಾಗಿ ಸದೃಢರಾಗಬಹುದು. ’ ಎಂದು ಹೇಳಿದರು.

ADVERTISEMENT

ಪೊಲೀಸ್ ಸಿಬ್ಬಂದಿಯ ಗೌರವ ಸಮರ್ಪಣೆಯ ಪಥ ಸಂಚಲನ ರದ್ದುಪಡಿಸಿ, ಕೇವಲ ಉದ್ಘಾಟನೆ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ, ಡಿವೈಎಸ್ಪಿ ಉದಯಭಾಸ್ಕರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.