ADVERTISEMENT

2 ದೇವಾಲಯಗಳಲ್ಲಿ ಹುಂಡಿ ಕಳವು

ಎರಡು ದೇವಸ್ಥಾನಗಳಿಂದ ಹಣ ಕಳವು, ಬಸ್ ನಿಲ್ದಾಣದಲ್ಲಿ ಖಾಲಿ ಹುಂಡಿ ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:51 IST
Last Updated 23 ಜೂನ್ 2025, 14:51 IST
ಹೆತ್ತೂರು ಪಕ್ಕದ ನಡನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಪತ್ತೆಯಾದ ಖಾಲಿ ಹುಂಡಿ.
ಹೆತ್ತೂರು ಪಕ್ಕದ ನಡನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಪತ್ತೆಯಾದ ಖಾಲಿ ಹುಂಡಿ.   

ಹೆತ್ತೂರು: ಹೋಬಳಿ ಬೊಮ್ಮನಕೆರೆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಬೀಗ ಮುರಿದು ಕಳ್ಳರು ಹುಂಡಿಯಲ್ಲಿ ಕಳವು ಮಾಡಿದ್ದಾರೆ.

ದೇವಸ್ಥಾನದ ಹುಂಡಿ ಹೊಡೆದ ಕಳ್ಳರು ಹಣವನ್ನು ತೆಗೆದುಕೊಂಡು ಖಾಲಿ ಹುಂಡಿಯನ್ನು ಪಕ್ಕದ ನಡನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಎಸೆದುಹೋಗಿದ್ದಾರೆ. ಸಮೀಪದ ಕುಣಿಗಲ್ ಗ್ರಾಮದ ದೇವಸ್ಥಾನದಲ್ಲಿಯೂ ಹುಂಡಿಯಲ್ಲಿ ಹಣ ಕಳವು ನಡೆದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.