ADVERTISEMENT

ಧರ್ಮಸ್ಥಳ ಬಸ್‌ಗೆ ಕಲ್ಲು, ಚಾಲಕನಿಗೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 14:14 IST
Last Updated 19 ಏಪ್ರಿಲ್ 2021, 14:14 IST

ಹಾಸನ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ನಡುವೆ ಜಿಲ್ಲೆಯಲ್ಲಿ ಸೋಮವಾರ 237 ಬಸ್‌ಗಳು ಸಂಚರಿಸಿದ್ದು, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಂಚರಿಸುತ್ತಿದ್ದ ಬಸ್‌ಗೆ ಭಾನುವಾರ ರಾತ್ರಿಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ.

ಬಿ.ಎಂ. ರಸ್ತೆಯ ಕೃಷಿ ಕಾಲೇಜು ಬಳಿ ರಾತ್ರಿ ಕಲ್ಲು ಹೊಡೆದ ಪರಿಣಾಮ ಬಸ್‌ ಗಾಜು ಪುಡಿಯಾದವು. ಚಾಲಕನ ಎದೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಸಂಬಂಧಚನ್ನರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಷ್ಕರ ಆರಂಭವಾದ ದಿನದಿಂದಲೂ ಬಸ್‌ಗೆ ಕಲ್ಲು ತೂರಾಟ ಪ್ರಕರಣಗಳು ಸಂಭವಿಸತ್ತಲೇ ಇವೆ. ಈವರೆಗೂ ಐದು ನೌಕರರ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.

ADVERTISEMENT

ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ನಿಗದಿತ ಸಮಯಕ್ಕೆ ಬಸ್‌ಗಳು ಸಂಚಾರ ನಡೆಸಿದವು. ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. 480ಕ್ಕೂ ಹೆಚ್ಚು ನೌಕರರು ಕರ್ತವ್ಯಕ್ಕೆ ಹಾಜರಾದರು ಎಂದು ಬಸ್‌ ನಿಲ್ದಾಣ ಮೇಲ್ವಿಚಾರಕ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.