ಶ್ರವಣಬೆಳಗೊಳ ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದವರು ಶಿಕ್ಷಕರ ದಿನಾಚರಣೆಯಲ್ಲಿ ಗುರುಗಳನ್ನು ವಿದ್ಯಾರ್ಥಿಗಳು ಪೂಜಿಸಿದರು
ಶ್ರವಣಬೆಳಗೊಳ: ‘ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿದ್ದಾರೆ. ಅವರ ಪವಿತ್ರ ಸೇವೆಯನ್ನು ಸ್ಮರಿಸುವುದು ಆದ್ಯ ಕರ್ತವ್ಯ’ ಎಂದು ಕಾಂತರಾಜೇ ಅರಸ್ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಧು ಗೋಪಾಲ್ ಹೇಳಿದರು.
ಹೋಬಳಿಯ ಕಾಂತರಾಜಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಂತರಾಜೇ ಅರಸ್ ಹಳೆಯ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಎಚ್.ಎಚ್. ಸತೀಶ್ ಮಾತನಾಡಿ, ‘ಮಕ್ಕಳು ಶಿಕ್ಷಕರು ಕಲಿಸುವ ಪ್ರತಿಯೊಂದೂ ಪಾಠ ಪ್ರವಚನಗಳನ್ನು ಅತ್ಯಂತ ಶಿಸ್ತಿನಿಂದ ಶ್ರದ್ಧಾ ಪೂರ್ವಕವಾಗಿ ಆಲಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಎಲ್ಲಾ ಶಿಕ್ಷಕರು ಆಸೀನರಾಗುತ್ತಿದ್ದಂತೆ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ಗುರುಗಳ ಪಾದ ಪೂಜೆ ನೆರವೇರಿಸಿ ಪ್ರತ್ಯೇಕವಾಗಿ ಪುಷ್ಪವೃಷ್ಟಿ ಮಾಡಿ ಗೌರವದೊಂದಿಗೆ ಸಂಭ್ರಮಿಸಿದ್ದು, ವಿಶೇಷವಾಗಿತ್ತು.
ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಈ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಕೆ.ಪಿ.ಶೋಭಾ ದಂಪತಿಯನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಮಂಜೇಗೌಡ, ವಸತಿ ನಿಲಯದ ಮೇಲ್ವಿಚಾರಕ ಮಂಜುನಾಯಕ್, ಶಿಕ್ಷಕರಾದ ಗೋವಿಂದಪ್ಪ, ಲೋಕೇಶ್, ರವಿಕುಮಾರ್, ಬಾಲಗಂಗಾಧರ್, ಶೋಭಾ, ಇಂದಿರಾ ಮಣಿ, ಅಂಜು ಆರಾ, ವಾಣಿ, ಮಂಜುಳಾ, ಪ್ರಶಾಂತ್, ಬಿಂದು ಪಾಲ್ಗೊಂಡಿದ್ದರು.
ಶ್ರವಣಬೆಳಗೊಳ ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದವರು ಶಿಕ್ಷಕರ ದಿನಾಚರಣೆಯಲ್ಲಿ ಗುರುಗಳನ್ನು ವಿದ್ಯಾರ್ಥಿಗಳು ಪೂಜಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.