ಅರಕಲಗೂಡು: ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಆಲೂಗೆಡ್ಡೆ ಬೆಳೆಗೆ ಮುಂಜಾಗ್ರತಾ ಕ್ರಮವಾಗಿ ಶಿಲೀಂಧ್ರ ನಾಶಕಗಳನ್ನು ಮಳೆ ಇಲ್ಲದ ಸಮಯದಲ್ಲಿ ಸಿಂಪಡಿಸಬೇಕೆಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಮಂಗಳಾ ತಿಳಿಸಿದರು.
ತಾಲ್ಲೂಕಿನ ವಿವಿಧ ರೈತರ ಆಲೂಗೆಡ್ಡೆ ತಾಕುಗಳಿಗೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗಾಂಶ ಬಾಳೆ ತಾಕಿಗೆ ಇತ್ತೀಚೆಗೆ ಭೇಟಿ ನೀಡಿ ವೀಕ್ಷಿಸಿ ಆಲೂಗಡ್ಡೆ ಬೆಳೆಯ ಮಾಹಿತಿ ಪಡೆದು ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 650 ರಿಂದ 700 ಹೆಕ್ಟೇರ್ ಜಮೀನಿನಲ್ಲಿ ಆಲೂಗೆಡ್ಡೆ ಬೆಳೆ ಬಿತ್ತನೆ ನಡೆದಿದ್ದು, ಈವರೆಗೂ ಅಂಗಮಾರಿ ರೋಗ ಕಂಡು ಬಂದಿಲ್ಲ ಎಂದರು.
ಹಿರಿಯ ಸಹಾಯಕ ನಿರ್ದೆಶಕ ಡಿ.ರಾಜೇಶ್, ದೊಡ್ಡಮಗ್ಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಪಲ್ಲವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.