ADVERTISEMENT

ಸಿಹಿ ಹಂಚಿ, ಕಾರ್ಮಿಕ ದಿನ ಆಚರಣೆ

ನಸುಕಿನಲ್ಲಿ ಕೇಕ್‌ ಕತ್ತರಿಸಿದ ಪೌರಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 1 ಮೇ 2021, 14:23 IST
Last Updated 1 ಮೇ 2021, 14:23 IST
ಹಾಸನ ನಗರಸಭೆ ನೂತನ ಅಧ್ಯಕ್ಷ ಮೋಹನ್‌ ಅವನ್ನು ಪೌರಾಯುಕ್ತ ಕೃಷ್ಣಮೂರ್ತಿ ಸನ್ಮಾನಿಸಿದರು.
ಹಾಸನ ನಗರಸಭೆ ನೂತನ ಅಧ್ಯಕ್ಷ ಮೋಹನ್‌ ಅವನ್ನು ಪೌರಾಯುಕ್ತ ಕೃಷ್ಣಮೂರ್ತಿ ಸನ್ಮಾನಿಸಿದರು.   

ಹಾಸನ: ಕಾರ್ಮಿಕ ದಿನಾಚರಣೆ ಅಂಗವಾಗಿ ನಗರಸಭೆ ಅಧ್ಯಕ್ಷ ಆರ್‌. ಮೋಹನ್ ಹಾಗೂ ಪೌರಾಯುಕ್ತ ಕೃಷ್ಣಮೂರ್ತಿ ಶನಿವಾರ ನಸುಕಿನ 5.30 ರಲ್ಲಿಪೌರಕಾರ್ಮಿಕರೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಕಾರ್ಮಿಕರ ದಿನಾಚರಣೆಗೆ ಶುಭ ಕೋರಿದರು.

ನಗರಸಭೆ ಅಧ್ಯಕ್ಷ ಆರ್‌. ಮೋಹನ್‌ ಮಾತನಾಡಿ, ‘ನಗರದ ಸ್ವಚ್ಛತೆ ಹಾಗೂ ಸೌಂದರ್ಯ ಹೆಚ್ಚಿಸುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ಉತ್ತಮರೀತಿಯಲ್ಲಿ ಕೆಲಸ ಮಾಡಬೇಕು. ಸರ್ಕಾರಿ ಸೌಲಭ್ಯ ಕೊಡಿಸುವುದು ಮತ್ತು ನೌಕರಿಕಾಯಂಗೊಳಿಸುವುದು ನನ್ನ ಜವಾಬ್ದಾರಿ. ಕಾಯಂ ಪೌರಕಾರ್ಮಿಕರಿಗೆ 2ನೇಹಂತದದಲ್ಲಿ ನಿವೇಶನ ನೀಡುವ ಬಗ್ಗೆ ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದುಚರ್ಚಿಸಲಾಗುವುದು’ ಎಂದು ಹೇಳಿದರು.

ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ‘ಕೋವಿಡ್‌ ಸಂದರ್ಭದಲ್ಲಿ ಕಾರ್ಮಿಕರೂಆರೋಗ್ಯದ ಕಡೆ ಗಮನ ಹರಿಸಬೇಕು. ಕುಡಿಯಲು ಬಿಸಿ ನೀರು ಬಳಸಬೇಕು ಹಾಗೂ2ನೇ ಹಂತದ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯೋಗೇಶ್ ಅವರು ನಗರಸಭೆನೂತನ ಅಧ್ಯಕ್ಷರನ್ನು ಸನ್ಮಾನಿಸಿದರು. ಸ್ವಚ್ಛತೆಯಲ್ಲಿ ಹಾಸನ ಮೊದಲ ಸ್ಥಾನಕ್ಕೆತರುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಹಿರಿಯ ಆರೋಗ್ಯ ನಿರೀಕ್ಷಕರಾದ ಆನಂದ್, ಮಂಜುನಾಥ್, ಪೌರಕಾರ್ಮಿಕರಮೇಲ್ವಿಚಾರಕರಾದ ಪರಶುರಾಮ, ನಾಗಭೂಷಣ್, ನರಸಿಂಹ, ದೇವರಾಜು,ನೌಕರರಾದ ಮಾರ, ಮುನಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.