ADVERTISEMENT

ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರ ಸಾವು

663 ಮಂದಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 14:35 IST
Last Updated 22 ಏಪ್ರಿಲ್ 2021, 14:35 IST

ಹಾಸನ: ಜಿಲ್ಲೆಯಲ್ಲಿ ಗುರುವಾರ 663 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಚಿಕಿತ್ಸೆಗೆ ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಾಯಿಲೆಯಿಂದ ಅಸುನೀಗಿದವರ ಸಂಖ್ಯೆ 512ಕ್ಕೇರಿದೆ.

ಒಟ್ಟು ಸೋಂಕಿತ ಸಂಖ್ಯೆ 33,806ಕ್ಕೆ ಏರಿಕೆಯಾಗಿದ್ದು, 3,074 ಸಕ್ರಿಯ ಪ್ರಕರಣಗಳ ಪೈಕಿ 26 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಂಗಳವಾರ ಬಿಡುಗಡೆಯಾದ 109 ಮಂದಿ ಸೇರಿ ಈವರೆಗೆ 30,220 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.

ಹೊಸದಾಗಿ ಹಾಸನ ತಾಲ್ಲೂಕಿನಲ್ಲಿ 285 ಮಂದಿ, ಅರಕಲಗೂಡು 90, ಅರಸೀಕೆರೆ 65, ಹೊಳೆನರಸೀಪುರ 25, ಚನ್ನರಾಯಪಟ್ಟಣ 101, ಸಕಲೇಶಪುರ 41, ಆಲೂರು 15, ಬೇಲೂರು 38 ಹಾಗೂ ಇತರೆ ಜಿಲ್ಲೆಯ 3 ಮಂದಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.