ADVERTISEMENT

ಕೊಣನೂರು | ಟ್ರ್ಯಾಕ್ಟರ್ ಪಲ್ಟಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:13 IST
Last Updated 22 ಆಗಸ್ಟ್ 2025, 2:13 IST
ಕೊಣನೂರು ಹೋಬಳಿಯ ಕಬ್ಬಳಿಗೆರೆ ಬೆಟ್ಟದ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಯುವಕ ಮೃತಪಟ್ಟಿರುವುದು 
ಕೊಣನೂರು ಹೋಬಳಿಯ ಕಬ್ಬಳಿಗೆರೆ ಬೆಟ್ಟದ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಯುವಕ ಮೃತಪಟ್ಟಿರುವುದು    

ಕೊಣನೂರು: ಹೋಬಳಿಯ ಕಬ್ಬಳಿಗೆರೆ ಬೆಟ್ಟದ ರಸ್ತೆಯಲ್ಲಿ ಬುಧವಾರ ಸಂಜೆ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕರೊಬ್ಬರು ಮೃತಪಟ್ಟಿದ್ದಾರೆ.

ವೆಂಕಟೇಗೌಡನ ಕೊಪ್ಪಲು (ವಿಜಿ ಕೊಪ್ಪಲು) ಗ್ರಾಮದ ರವಿಕಿರಣ್ (20) ಮೃತ ಯುವಕ. ರವಿಕಿರಣ್ ಕಬ್ಬಳಿಗೆರೆ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವಾಗ  ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗುವ ಸಿಮೆಂಟ್ ರಸ್ತೆಯಲ್ಲಿ ಟ್ರಾಕ್ಟರ್ ಮಗುಚಿ ರವಿಕಿರಣ್ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.