ADVERTISEMENT

ಬೇಲೂರು: ವಿದ್ಯಾವಿಕಾಸ್ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 5 ಮೇ 2025, 12:53 IST
Last Updated 5 ಮೇ 2025, 12:53 IST
ಬಿ.ಆರ್.ಮನಸ್ವಿ 
ಬಿ.ಆರ್.ಮನಸ್ವಿ    

ಬೇಲೂರು: ಇಲ್ಲಿನ ವಿದ್ಯಾವಿಕಾಸ್ ಶಾಲೆಯು 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ 100ರಷ್ಟು ಸಾಧನೆ ಮಾಡಿದೆ.

ಒಟ್ಟು 31 ವಿದ್ಯಾರ್ಥಿಗಳಲ್ಲಿ ಬಿ.ಆರ್.ಮನಸ್ವಿ ಶೇ 99.2 ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದರೆ, ಪೂರ್ವಜ್ ಪಾಟೇಲ್ ಶೇ 98.72 ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ. ಎಚ್.ಕೆ.ಧ್ರುತಿ(ಶೇ 98.2), ಸಲ್ಮಾನ್ ಖಾನ್ (ಶೇ 96.96), ಬಿ.ಬಿ.ಆಯಿಷಾ (ಶೇ 96.64), ಇ.ಡಿ.ಪ್ರಥಮ್ (ಶೇ 96.64), ಎಸ್.ಎಜಾಸ್ (ಶೇ 96.48), ಬಿ.ಎನ್.ಮನೋಜ್ (ಶೇ 96.32), ಸಿ.ಡಿ.ಕಿಷನ್ (ಶೇ 96.32), ಬಿ.ಆರ್.ಹರಿಪ್ರಿಯ (ಶೇ 96.16), ಬಿ.ಜಿ.ವರುಣ್ (ಶೇ 95) ಅಂಕ ಪಡೆದಿದ್ದಾರೆ.

11 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದು, 9 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಪ್ರಥಮ ಶ್ರೇಣಿಯಲ್ಲಿ 11 ಮಕ್ಕಳು ಉತ್ತೀರ್ಣರಾಗಿದ್ದಾರೆ.

ADVERTISEMENT
ಪೂರ್ವಜ್ ಪಾಟೇಲ್
ಎಚ್.ಕೆ.ಧ್ರುತಿ
ಸಲ್ಮಾನ್ ಖಾನ್
ಬಿ.ಬಿ.ಆಯಿಷಾ
ಇ.ಡಿ.ಪ್ರಥಮ್
ಎಸ್.ಎಜಾಸ್
ಬಿ.ಎನ್.ಮನೋಜ್
ಸಿ.ಡಿ.ಕಿಷನ್
ಬಿ.ಆರ್.ಹರಿಪ್ರಿಯ
ಬಿ.ಜಿ.ವರುಣ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.