ADVERTISEMENT

ಜಗತ್ತಿನ ಮೊದಲ ಎಂಜಿನಿಯರ್ ವಿಶ್ವಕರ್ಮ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:56 IST
Last Updated 18 ಸೆಪ್ಟೆಂಬರ್ 2025, 2:56 IST
ಆಲೂರಿನ ತಾಲ್ಲೂಕು ಕಚೇರಿಯಲ್ಲಿ ಬುಧವಾರ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಆಲೂರಿನ ತಾಲ್ಲೂಕು ಕಚೇರಿಯಲ್ಲಿ ಬುಧವಾರ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.   

ಆಲೂರು: ವೇದಗಳ ಪ್ರಕಾರ ವಿಶ್ವಕರ್ಮರು ಜಗತ್ತಿನ ಸೃಷ್ಟಿಯ ಮೂಲ ಪುರುಷರು. ಋಗ್ವೇದದಲ್ಲಿ ವಿಶ್ವಕರ್ಮರನ್ನು ಸರ್ವಜ್ಞ, ಸೃಷ್ಟಿಕರ್ತ ಮತ್ತು ದೇವತೆಗಳ ಶಿಲ್ಪಿ ಎಂದು ಉಲ್ಲೇಖಿಸಲಾಗಿದೆ. ಯಜುರ್ವೇದ ಮತ್ತು ಅಥರ್ವವೇದಗಳಲ್ಲಿಯೂ ಅವರ ಉಲ್ಲೇಖವಿದೆ ಎಂದು ತಹಶೀಲ್ದಾರ್‌ ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚನ ಸಮಿತಿ, ವಿಶ್ವಕರ್ಮ ಸಮಾಜದ ತಾಲೂಕು ಘಟಕ, ವಿರಾಟ್ ವಿಶ್ವಕರ್ಮ ಯುವಕ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ದೇಶಕ್ಕೆ ಹಾಗೂ ಈ ನಾಡಿಗೆ ವಿಶ್ವಕರ್ಮರ ಕೊಡುಗೆ ಅವಿಸ್ಮರಣೀಯ. ಈ ನಾಡಿನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿದ್ದಾರೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ಸಹಸ್ರಾರು ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಕೆಲವು ಯುನೆಸ್ಕೊ ಪಟ್ಟಿಗೆ ಸೇರಿದ್ದು ಇವರ ಶಿಲ್ಪಕಲೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ADVERTISEMENT

ಸಮಾಜದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಸಿ. ಶಂಕರಾಚಾರ್ ಮಾತನಾಡಿ, ವಿಶ್ವಕರ್ಮರು ಕೇವಲ ದೇವತೆಗಳ ನಿರ್ಮಾಣಗಳಿಗೆ ಮಾತ್ರವಲ್ಲ, ಇಡೀ ವಿಶ್ವದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಗತ್ತಿನ ಎಲ್ಲ ಕೆಲಸಗಳನ್ನು ವಿಶ್ವಕರ್ಮರು ನಿರ್ವಹಿಸುತ್ತಿದ್ದರೂ ರಾಜಕೀಯವಾಗಿ ಪ್ರಾಧಾನ್ಯತೆ ದೊರೆಯದೇ ಇರುವುದು ವಿಷಾದನೀಯ ಎಂದರು.

ವಿರಾಟ್ ವಿಶ್ವಕರ್ಮ ಯುವಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿದರು. ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ತಹಶೀಲ್ದಾರ್ ಅಂಕೇಗೌಡ, ಗೌರವಾಧ್ಯಕ್ಷ ಬಿ.ವೈ. ಮಧುಕುಮಾರ್, ಉಪಾಧ್ಯಕ್ಷ ಎಂ.ಡಿ. ಪ್ರದೀಪ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಮಿಥುನ್, ಸಹ ಕಾರ್ಯದರ್ಶಿ ಪವನ್ ಕುಮಾರ್, ನಿರ್ದೇಶಕರಾದ ಜಿತೇಂದ್ರ, ಪರಮೇಶ್, ದುರ್ಗಾ ಪ್ರಸಾದ್, ಹೇಮಂತ್, ರವಿಕುಮಾರ್, ಕೋಮರಾಜ್ ಸೇರಿದಂತೆ ವಿಶ್ವಕರ್ಮ ಸಮಾಜದವರು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.