ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ವಿದ್ಯಾನಗರದಲ್ಲಿ ಸೆರೆಹಿಡಿದಿದ್ದ ಕಾಡುಕೋಣ ಕೆಲ ಸಮಯದ ನಂತರ, ಅರಣ್ಯ ಇಲಾಖೆ ಸುಪರ್ದಿಯಲ್ಲಿ ಇದ್ದಾಗಲೇ ಮೃತಪಟ್ಟಿದೆ.
ಪಟ್ಟಣಕ್ಕೆ ನುಗ್ಗಿದ್ದ ಕಾಡುಕೋಣ, 54 ವರ್ಷದ ಶಾಂತಮ್ಮ ಅವರ ಮೇಲೆ ದಾಳಿ ನಡೆಸಿತ್ತು. ಕಾರು ಮತ್ತು 3 ಬೈಕ್ ಜಖಂಗೊಳಿಸಿತ್ತು.
ಮೈಸೂರಿನಿಂದ ಬಂದಿದ್ದ ಅರಿವಳಿಕೆ ತಜ್ಞರು, ಚುಚ್ಚು ಮದ್ದು ನೀಡಿದ್ದು ಸೆರೆ ಹಿಡಿದ ಬಳಿಕ ಅದನ್ನು ಲಾರಿಗೆ ಹತ್ತಿಸಲಾಗಿತ್ತು.
‘ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಅರಣ್ಯಾಧಿಕಾರಿ ಖಲಂದರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.